ಲೋಕಾರ್ಪಣೆಗೂ ಮೊದಲೇ ರಸ್ತೆ ಬಿರುಕು !
-ರವಿ ರಾಠೋಡ್
ವಾಡಿ,ಜೂ.25-ಒಳ ಗ್ರಾಮಗಳು ಹಾಗೂ ತಾಂಡಾಗಳು ಹೆದ್ದಾರಿ ರಸ್ತೆಯ ಸಂಪರ್ಕಕ್ಕೆ ಬಂದು ಜನರು ಸುಗಮ ಓಡಾಟ ನಡೆಸಬೇಕು ಎನ್ನುವ ಇಚ್ಛೆಯಿಂದ ಸಚಿವ ಪ್ರಿಯಾಂಕ್ ಖರ್ಕೆ ಅವರು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದ ಲೋಕಾರ್ಪಣೆಗೂ ಮೊದಲೇ ರಸ್ತೆ ಬಿರುಕು ಬಿಟ್ಟು ನಿಂತ್ತಿದೆ. ಇದಕ್ಕೆ ತಾಜಾ ಉದಾಹರಣೆ ಬಳಿರಾಮ ಚೌಕದಿಂದ ಕಮರವಾಡಿ, ಸೂಲಹಳ್ಳಿ ಗ್ರಾಮದವರೆಗೆ ನಿರ್ಮಾಣವಾಗುತ್ತಿರುವ ರಸ್ತೆಯೇ ಸಾಕ್ಷಿಯಾಗಿದೆ.
ಬಳಿರಾಮ್ ಚೌಕ್‍ನಿಂದ ಸೂಲಹಳ್ಳಿವರೆಗೆ 6 ಕಿಮೀ ರಸ್ತೆ ಕಾಮಗಾರಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಲ್ಲಿ 4.50 ಕೋಟಿ ಅನುದಾನ ಬಿಡುಗಡೆ ಮಾಡಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ ರಸ್ತೆ ಬಳಕೆಗೂ ಮುನ್ನ ಕೆಲವೆಡೆ ಡಾಂಬಾರೀಕರಣ ರಸ್ತೆ ಸೀಳಿ ನಿಂತಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಡಾಂಬರೀಕರಣ ಮಾಡಿ ರಸ್ತೆ ಮುಗಿಸಲಾಗಿದೆ. ಆದರೆ ರಸ್ತೆ ನಿರ್ಮಾಣ ವೈಜ್ಞಾನಿಕ ನಿಯಮಗಳನ್ನು ಗಾಳಿಗೆ ತೂರಲಾಗಿದ್ದರಿಂದ ರಸ್ತೆ ಹಾಳಾಗುತ್ತಿದೆ. 6 ತಿಂಗಳು ಸಹ ಬಳಕೆಗೆ ಬರುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ.
“ಉತ್ತಮ ರಸ್ತೆ ನಿರ್ಮಾಣವಾಗಿ 8-10 ವರ್ಷ ನಿಶ್ಚಿಂತೆಯಿಂದ ಓಡಾಡಬಹುದು ಎಂದು ಕನಸು ಕಂಡಿದ್ದೆವು. ಆದರೆ ಒಂದು ಕಡೆ ರಸ್ತೆ ಆರಂಭವಾಗಿ ಇನ್ನೊಂದು ಕಡೆ ಮುಗಿಯುವಷ್ಟರಲ್ಲಿ ಸೀಳಿ ನಿಂತಿದ್ದು ರಸ್ತೆ ನಿರ್ಮಾಣದಲ್ಲಿ ಅಕ್ರಮ ಎಸಗಲಾಗಿದೆ. ಅಕ್ರಮದಲ್ಲಿ ಶಾಮಿಲಾಗಿರುವವರಿಗೆ ಶಿಕ್ಷೆ ಒದಗಿಸಬೇಕು. ಗುಣಮಟ್ಟದ ಕಾಮಗಾರಿ ನಿರ್ಮಿಸದೆ ಬೇಜವಾಬ್ದಾರಿ ತೋರಿದ ಗುತ್ತಿಗೆದಾರ ಹಾಗೂ ಗುಣಮಟ್ಟದ ಕೆಲಸ ತೆಗೆದುಕೊಳ್ಳುವಲ್ಲಿ ವಿಫಲರಾದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಧಿಕಾರಿಗಳ ವಿರುದ್ಧ ಕ್ರಜ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಆದ್ಯತೆಯಾಗಿದೆ ಎನ್ನುವ ಸಂಕಲ್ಪ ಮಾಡಿರುವ ಸಚಿವÀರ ಹೆಸರಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕಾಮಗಾರಿ ಪೂರ್ಣವಾಗಿಲ್ಲ, ಅಷ್ಟರಲ್ಲೇ ಹಾಕಿದ ಡಾಂಬರು ಸೀಳಿ ನಿಂತಿದೆ. ರಸ್ತೆ ಅಕ್ಕಪಕ್ಕ ಹಾಕಿರುವ ಮಣ್ಣು ಸಹ ಕಳಪೆಯಾಗಿದ್ದು, ಮಳೆ ನೀರಿಗೆ ಕೊಚ್ಚಿ ಹೋಗುತ್ತಿದೆ. ಇಷ್ಟು ಕೋಟಿ ಅನುದಾನ ಬಿಡುಗಡೆಯಾದರು ಗುಣಮಟ್ಟದ ರಸ್ತೆ ಮಾತ್ರ ನಡೆದಿಲ್ಲ. ರಸ್ತೆ ಗುಣಮಟ್ಟ ಪರಿಶೀಲಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಸಪ್ಪಗುಡಿ ಬಡಾವಣೆಯ ನಿವಾಸಿ ಅನಿಲ್ ರಾಠೋಡ ಆಗ್ರಹಿಸಿದ್ದಾರೆ.