ಬಾವಗಿ: ಮಳೆಗಾಗಿ ಗಣೇಶನಿಗೆ ಮೊರೆ
ಬೀದರ್ :ಜೂ.25:ತಾಲುಕಿನ ಬಾವಗಿ ಗ್ರಾಮದಲ್ಲಿ ಮಳೆ ಕೊರತೆಯಿಂದಾಗಿ ಗ್ರಾಮದ ಜನರು ಗ್ರಾಮದೇವರಿಗೆ ಹೂವು ಹಣ್ಣು ಅರ್ಪಣೆ ಗ್ರಾಮ ದೆವತೆಗಳಿಗೆ ವಿಶೇಷ ಪೂಜೆ ಸಂಕಟ ಚತುರ್ಥಿಯ ವಿಶೇಷ ಪೂಜೆ ವಿನಾಯಕನ ಮೊರೆ ಹೋದರು.
ಗಣೇಶ ಮೂರ್ತಿಗೆ ಕುಂಭಾಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರುಣನ ಕೃಪೆಗಾಗಿ ಪ್ರಾರ್ಥಿಸಿತು.
ಬೆಳಿಗ್ಗೆ ಗಣೇಶ ಗುಡಿಯನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸಿದನಂತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗಣೇಶ ಮೂರ್ತಿ ಕುಂಭಾಭಿಷೇಕ ನೆರವೇರಿಸಲಾಯಿತು. ಆನಂತರ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪಾರ್ಥಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಾಂತವೀರ ಹಜರಗಿ ಸಂಗಮೇಶ್ ಹಜರಗಿ ಚನ್ನಮಲಪ್ಪ ಹಜರಗಿ ರೇವಣಪ್ಪ ಭದ್ರೆಣೆ ಶಿವಕುಮಾರ್ ರಿಶೆಟ್ಟಿ ರಾಜಕುಮಾರ್ ಪಾಟೀಲ್ ಜಗನ್ನಾಥ ಚಿದ್ರಿ ಮಾರುತಿ ಹೂಗಾರ್ ಕಾಶಿನಾಥ್ ಪಕ್ಕ ಭದ್ರೇಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ ಭದ್ರಯ್ಯ ಸ್ವಾಮಿ ಸ್ಥಳೀಯ ಮುಖಂಡರು, ಸಾರ್ವಜನಿಕರು ವರುಣನ ಕೃಪೆಗಾಗಿ ವಿನಾಯಕನನ್ನು ಪ್ರಾರ್ಥಿಸಿದರು.