ಬಸವರಾಜ ಬಾಗೇವಾಡಿಗೆ ರಾಷ್ಟ್ರೀಯ ಯೋಗ ಭಾರತಿ ಪ್ರಶಸ್ತಿ
ವಿಜಯಪುರ, ಜೂ.25:ನಗರದ ಬಸವರಾಜ ಬಾಗೇವಾಡಿ ಅವರಿಗೆ ರಾಷ್ಟ್ರೀಯ ಯೋಗ ಭಾರತಿ ಪ್ರಶಸ್ತಿ ಲಭಿಸಿದೆ.
ಧಾರವಾಡದ ಅಕ್ಷರದೀಪ ಫೌಂಡೇಶನ್, ಬೆಳಗಾವಿ ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕøತಿಕ ಕಲಾವೇದಿಕೆ ಇವರ ಸಹಯೋಗದಲ್ಲಿ ಆನ್ ಲೈನ್ ದಲ್ಲಿ ನಡೆದ ರಾಷ್ಟ್ರೀಯ ಯೋಗೋತ್ಸವ ಕಾರ್ಯಕ್ರಮದಲ್ಲಿ ಬಸವರಾಜ ಬಾಗೇವಾಡಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಯೋಗ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಾಧಿಸಿದ ಬಸವರಾಜ ಬಾಗೇವಾಡಿ (ಉತ್ನಾಳ) ಸೇವೆಯನ್ನು ಗುರುತಿಸಿ ಈ ವರ್ಷದ ರಾಷ್ಟ್ರೀಯ ಯೋಗ ಭಾರತಿ ಪ್ರಶಸ್ತಿ-2024 ರ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅಕ್ಷರ ದೀಪ ಫೌಂಡೇಶನ್ ಅಧ್ಯಕ್ಷ ಪ್ರವೀಣಕುಮಾರ ಕನ್ನಾಳ ಹಾಗೂ ಅಕ್ಷರದೀಪ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ರೋಹಿಣಿ ಮಿರ್ಜಿ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.