ಸಹಕಾರಿ ಬೆಳವಣಿಗೆಗೆ ಆಡಳಿತ ಮಂಡಳಿ ಪಾತ್ರ ಹಿರಿದು:ಪಾಟೀಲ
ತಾಳಿಕೋಟೆ:ಜೂ.25: ಸಹಕಾರಿ ಸಂಘಗಳನ್ನು ಕೇವಲ ಹುಟ್ಟು ಹಾಕಿದರೆ ಸಾಲದು ಅದನ್ನು ಆರ್ಥಿಕವಾಗಿ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಸಿಬ್ಬಂದಿಗಳ ಪಾತ್ರ ಹಿರಿದಾಗಿದ್ದು ಗ್ರಾಹಕರ ಮನಸ್ಸು ಗೆಲ್ಲುವದರೊಂದಿಗೆ ಬ್ಯಾಂಕಿನ ಮೇಲೆ ಪ್ರೀತಿ ವಿಸ್ವಾಸ ಗಳಿಸುವಲ್ಲಿ ಯಶಸ್ವಿಯಾಗಬೇಕಾಗುತ್ತದೆ ಅಂತಹ ಹೆಜ್ಜೆ ಬಸವೇಶ್ವರ ಸಹಕಾರಿ ಪತ್ತಿನ ಸಂಘ ನಿ,ದ ಆಡಳಿತ ಮಂಡಳಿ ಇಡುತ್ತಾ ಸಾಗಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರು ಹಾಗೂ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ) ಅವರು ಹೇಳಿದರು.
ಸೋಮವಾರರಂದು ಪಟ್ಟಣದ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ,ದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಶಿನಾಥ ಮುರಾಳ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಈರಣ್ಣ ಸಜ್ಜನ ಅವರ ಪದ ಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಬಸವೇಶ್ವರ ಸೌಹಾರ್ದ ಸಹಕಾರಿ ನಿ,ವು ಚಿಕ್ಕದಾಗಿ ಪ್ರಾರಂಭಗೊಂಡು 17 ವರ್ಷದ ಅವಧಿಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ ಇದಕ್ಕೆ ಮೂಲ ಕಾರಣ ಈ ಸಹಕಾರಿಯ ಆಡಳಿತ ಮಂಡಳಿ, ಮತ್ತು ಸಿಬ್ಬಂದಿಗಳ ಸಹಕಾರ ಮನೋಭಾವನೆ ಬೆಳೆಯಲು ಕಾರಣವಾಗಿದೆ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಗಳು ಗ್ರಾಹಕರ ವಿಸ್ವಾಸ ಗೆಲ್ಲುವಲ್ಲಿ ಯಶಸ್ವಿಯಾದ ಪರಿಣಾಮ ಸಹಕಾರಿ ಬೆಳೆಯಲು ಕಾರಣವಾಗಿದೆ ಎಂದರು. ಯಾರೇ ಗ್ರಾಹಕರು ಬ್ಯಾಂಕಿಗೆ ಬಂದಾಗ ಅವರೊಂದಿಗೆ ಆತ್ಮೀಯತೆಯೊಂದಿಗೆ ಮಾತನಾಡಿ ಅವರು ಪಡೆದುಕೊಳ್ಳುವ ಸಾಲದ ಉದ್ದೇಶವನ್ನು ಅರೀತುಕೊಂಡು ಅಗತ್ಯಕ್ಕೆ ತಕ್ಕಂತೆ ಸಾಲವನ್ನು ನೀಡಿ ಗ್ರಾಹಕರು ಅಭಿವೃದ್ದಿ ಹೊಂದಿ ಪಡೆದು ಸಾಲವನ್ನು ಸಂಪೂರ್ಣ ತುಂಬಿ ಯಶಸ್ವಿಯಾಗಿ ಬ್ಯಾಂಕಿಗೆ ಡಿಫಾಜಿಟ್ ಮಾಡಿದಾಗ ಸಹಕಾರಿ ಸಂಸ್ಥೆಗಳು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಲ್ಲರ ಸಹಕಾರ ಮತ್ತು ಶ್ರೇಯೋಭಿಲಾಸೆಯಿಂದ ಬಸವೇಶ್ವರ ಸೌಹಾರ್ದ ಸಹಕಾರಿ ಬೆಳೆಯಲು ಕಾರಣವಾಗಿದೆ ಎಂದ ಅವರು ಈ ಹಿಂದಿನ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿ.ಜಿ.ಎಸ್.ಕಶೆಟ್ಟಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನ ತುಂಬುವಂತಹ ಪ್ರಕ್ರೀಯೇ ನಡೆದಿದೆ ದಿ.ಜಿ.ಎಸ್.ಕಶೆಟ್ಟಿ ಅವರು ಇಲ್ಲದಿದ್ದರೂ ಕೂಡಾ ಸಂಸ್ಥೆಯ ಬಗ್ಗೆ ಅವರು ಹೊಂದಿದ್ದ ಕಾಳಜಿ ನೆನೆಯುವಂತಾಗಿದೆ ಎಂದ ಅವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಕಾಶಿನಾಥ ಮುರಾಳ ಅವರು ಮತ್ತು ಉಪಾಧ್ಯಕ್ಷರಾದ ಈರಣ್ಣ ಸಜ್ಜನ ಅವರು ಬ್ಯಾಂಕಿನ ಬೆಳವಣಿಗೆಯಲ್ಲಿ ಹಿರಿಯ ಪಾತ್ರ ವಹಿಸಲು ಎಂದು ಆಶಿಸಿದರು. ಇನ್ನೋರ್ವ ಅತಿಥಿ ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಅವರು ಮಾತನಾಡಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ನಿ,ವು ಅಲ್ಪ ಅವಧಿಯಲ್ಲಿ ಅಗಾದವಾಗಿ ಬೆಳೆದು ನಿಂತಿದೆ ಈ ಸಂಘದ ಬೆಳವಣಿಗೆಯಲ್ಲಿ ಆಡಳಿತ ಮಂಡಳಿಯ ಶ್ರಮದ ಜೊತೆಗೆ ಸಿಬ್ಬಂದಿಗಳ ಶ್ರಮವು ಅಡಗಿದೆ ಪ್ರಾಮಾಣಿಕತನದಿಂದ ಎಲ್ಲರೂ ಕೆಲಸ ಮಾಡಿದ್ದರ ಪರಿಣಾಮ ಸಂಸ್ಥೆ ಬೆಳೆಯಲು ಕಾರಣವಾಗಿದ್ದು ನೂತನವಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಕಾಶಿನಾಥ ಮುರಾಳ ಅವರು ಉಪಾಧ್ಯಕ್ಷರಾದ ಈರಣ್ಣ ಸಜ್ಜನ ಅವರು ಮುಂದಾಳತ್ವದಲ್ಲಿ ಸಹಕಾರಿ ಸಂಘವನ್ನು ಬ್ಯಾಂಕ್‍ನ್ನಾಗಿ ಪರಿವರ್ತನೆ ಮಾಡುವತ್ತ ಹೆಜ್ಜೆ ಹಾಕಲಿ ಎಂದು ಆಶಿಸಿದರು.
ಬಸವೇಶ್ವರ ಸೌಹಾರ್ದ ಸಹಕಾರಿ ನಿ,ದ ನೂತನ ಅಧ್ಯಕ್ಷರಾಗಿ ಪದಗ್ರಹಣ ಹೊಂದಿದ ಕಾಶಿನಾಥ ಮುರಾಳ ಅವರು ಮಾತನಾಡಿ ಬಸವೇಶ್ವರ ಸೌಹಾರ್ದ ಸಹಕಾರಿ ಜನ್ಮ ತಾಳಿದಾಗಿನಿಂದಲೂ ಸಂಸ್ಥಾಪಕ ಅಧ್ಯಕ್ಷರಾಗಿ ದಿ.ಜಿ.ಎಸ್.ಕಶೆಟ್ಟಿ ಅವರು ಕಾರ್ಯನಿರ್ವಹಿಸುತ್ತಾ ಬಂದಿದ್ದರು ಅವರ ಅಗಲಿಕೆಯಿಂದ ಅಧಿಕಾರ ಹಸ್ಥಾಂತರ ಮಾಡುವದು ಬಂದಿದೆ ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿರುವ ಬಿ.ಎಸ್.ಪಾಟೀಲ(ಯಾಳಗಿ) ಅವರು ನಮ್ಮ ಸಹಕಾರಿಯ ನಿರ್ದೇಶಕರಾಗಿರುವದು ಹೆಮ್ಮೆ ಎಂದು ಹೇಳಲು ಬಯಸುತ್ತೇನೆ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಹಕಾರಿ ನಿ,ದ ಬೆಳವಣಿಗೆಗೆ ಶ್ರಮಿಸುತ್ತೇನೆಂದರು.
ಇದೇ ಸಮಯದಲ್ಲಿ ಶ್ರೀ ಬಸವೇಶ್ವರ ಸಹಕಾರಿ ಪತ್ತಿನ ಸಂಘ ನಿ,ದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಕಾಶಿನಾಥ ಮುರಾಳ ಅವರಿಗೆ ಮತ್ತು ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಈರಣ್ಣ ಸಜ್ಜನ ಅವರಿಗೆ ಬ್ಯಾಂಕಿನ ನಿರ್ದೇಶಕ ಮಂಡಳಿ ಮತ್ತು ವಿವಿಧ ಸಹಕಾರಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳು ಅಲ್ಲದೇ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಬಸವೇಶ್ವರ ಸೌಹಾರ್ದ ಸಹಕಾರಿಯ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.
ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಸಾನಿದ್ಯ ವಹಿಸಿದ್ದರು.
ಈ ಸಮಯದಲ್ಲಿ ಮುಖಂಡರುಗಳಾದ ಬಿ.ಎನ್.ಹಿಪ್ಪರಗಿ, ಶಂಕರಗೌಡ ಹಿಪ್ಪರಗಿ, ಪ್ರಭುಗೌಡ ಮದರಕಲ್ಲ, ಬಾಬು ಬಡಗಣ, ಎಂ.ಎಸ್.ಸರಶೇಟ್ಟಿ, ಶ್ರೀಮತಿ ಮುರಿಗೆಮ್ಮ ಯರನಾಳ, ಶ್ರೀಮತಿ ಶ್ರೀದೇವಿ ನಾಯಕೋಡಿ, ಅಶೋಕ ಜಾಲವಾದಿ, ಚನಬಸ್ಸು ರೂಡಗಿ, ಸುಭಾಸ ಹೂಗಾರ, ಡಿ.ಕೆ.ಪಾಟೀಲ, ಸಿದ್ದನಗೌಡ ಪಾಟೀಲ(ನಾವದಗಿ), ಡಿ.ವ್ಹಿ.ಪಾಟೀಲ, ಕಾಶಿನಾಥ ಸಜ್ಜನ, ರತನಸಿಂಗ್ ಕೊಕಟನೂರ, ಚನಮಲ್ಲು ಕತ್ತಿ, ವಾಸುದೇವ ಹೆಬಸೂರ, ಪ್ರಭು ಬಿಳೇಭಾವಿ, ಶಶಿಧರ ಡಿಸಲೆ, ಶಂಕರಗೌಡ ಪಾಟೀಲ, ಬಸವರಾಜ ಕಶೆಟ್ಟಿ, ಪ್ರಕಾಶ ಕಶೆಟ್ಟಿ, ಯಂಕಣ್ಣ ತಾಳಪಲ್ಲೆ, ಎಂ.ಸಿ.ಕತ್ತಿ, ಬ್ಯಾಂಕಿನ ಸಿಬ್ಬಂದಿಗಳಾದ ಕುಮಾರ ಹಣಮಶೆಟ್ಟಿ, ಸಂಗಮೇಶ ಯಾಳಗಿ, ಮಹೇಶ ಬಳಗಾನೂರ, ಕಾಶಿನಾಥ ಮಣೂರ, ಚಂದ್ರಶೇಖರ ಗೆಜ್ಜಿ, ರಾಜಶೇಖರ ಪಾಟೀಲ, ಸಚೀನ ಸಜ್ಜನ, ಮೊದಲಾದವರು ಇದ್ದರು.
ವ್ಯವಸ್ಥಾಪಕ ಮತ್ತುಗೌಡ ಪಾಟೀಲ ನಿರೂಪಿಸಿ ವಂದಿಸಿದರು.