ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ
ಸೇಡಂ,ಜೂ,25: ತಾಲೂಕಿನ ಬೆನಕನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಮಪೂಜ್ಯ ಶ್ರೀ ಕೇದಾರ ಲಿಂಗದೇವರು ಶ್ರೀ ಸಿದ್ದಲಿಂಗೇಶ್ವರ ವಿರಕ್ತಮಠ ಬೆನಕನಹಳ್ಳಿ ರವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆಯಲ್ಲಿ ಅಧ್ಯಕ್ಷತೆ ಶ್ರೀಮತಿ ಶಶಿಕಲಾ ದೊಡ್ಡಪ್ಪ,ಯೋಜನಾಧಿಕಾರಿಗಳು ಮಂಜುನಾಥ್ ಎಸ್ ಜಿ, ಶಾಲೆಯ ಮುಖ್ಯ ಗುರುಗಳು ರೇವಣಸಿದ್ದಪ್ಪ ಯುವ ಮುಖಂಡರು ಶಿವಲಿಂಗ ರೆಡ್ಡಿ ಪಾಟೀಲ್, ಗ್ರಾಮದ ಹಿರಿಯರು ಬಸವರಾಜ ಪಾಟೀಲ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ವಿಶ್ವನಾಥ್ ರೆಡ್ಡಿ,ಗ್ರಾಮ ಪಂಚಾಯತ್ ಅಧ್ಯಕ್ಷರು ಹನುಮಂತ್ ರೆಡ್ಡಿ, ನಿವೃತ್ತ ಶಿಕ್ಷಕರು ಗುರುನಾಥ್, ತಾಲೂಕಿನ ಕೃಷಿ ಮೇಲ್ವಿಚಾರಕರು &ಚಿmಠಿ; ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು, ಶಾಲೆಯ ವಿದ್ಯಾರ್ಥಿಗಳು ಇದ್ದರು.