ಸವಿತಾ ಸಮಾಜದ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ
ಕಲಬುರಗಿ,ಜೂ,25: ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಆನಂದ ವಾರಿಕ ಅವರ ನೇತೃತ್ವದಲ್ಲಿ ಮಹಾದೇವಿ ತಾಯಿ ವೃದ್ಧಾಶ್ರಮದ ವೃದ್ಧ ಸದಸ್ಯರಿಗೆ ಉಚಿತ ಕ್ಷೌರ ಸೇವೆ ಬೆಳಗಿನ ಉಪಹಾರದ ನಂತರ ಸವಿತಾ ಸಮಾಜದ ನೆಹರು ನಗರ ಕಾರ್ಯಾಲಯದ ಆವರಣದಲ್ಲಿ ಸಮುದಾಯದ ಹಿರಿಯರು ಯುವಕರು ಮಹಿಳಾ ಸದಸ್ಯರು ವಿವಿಧ ರೀತಿಯ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.ಪ್ರಸಕ್ತ ಸಾಲಿನಲ್ಲಿ ಭೀಕರ ಬರಗಾಲ ಎದುರಿಸಿದಂತಾಗಿದೆ ಜಿಲ್ಲಾಧ್ಯಕ್ಷ ಆನಂದ ವಾರಿಕ ಮಾತನಾಡಿ ಸಾಮಾಜಿಕ ಸಂಘಟನೆಗಳು ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಸಸಿ ನೆಡುವುದರಿಂದ ನೀರು ಮಳೆ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಿಸಿದಂತಾಗುತ್ತದೆ ಇದೆ ಮಂಡಲ ಅಧ್ಯಕ್ಷರುಗಳಾದ ಅಂಬು ರೋಜಾ, ಚಂದ್ರು ಗೋಗಿ, ದತ್ತಾತ್ರೇಯ,ಖಂಡಪ್ಪ, ನರಸಿಂಹಲು ಅಡಕಿ, ಸೂರ್ಯಕಾಂತ ಬೆಣ್ಣೂರ ಜಿಲ್ಲಾ ಸವಿತಾ ಸಮಾಜದ ರಾಜೇಂದ್ರ ಮಾನೆ, ಮಹೇಶ ಪಾಣೆಗಾಂವ,ಕಿರಣ್ ಕುಮಾರ್ ಚಿಕಲಿಕರ್ ಪ್ರಕಾಶ ಶಶಿಕುಮಾರ್ ನರೇಶ್ ಜುಟಪಲ್ಲಿ ಸಿದ್ದು, ಅಂಬರೀಷ್ ಇಟಗಾ,ಚಿರು,ಮಲ್ಲು ಕುಕನೂರು, ಮಲ್ಲಿಕಾರ್ಜುನ ನಾಯಕೋಡಿ ರಾಜಶೇಖರ ಚಿಂಚೋಳಿ,ಹಿರಿಯರಾದ ಬಾಲರಾಜ್ ಚಿನ್ನಾಕರ , ರಮೇಶ್ ಬೆಳಕೋಟಾ, ಮಹಿಳಾ ಘಟಕದ ಜ್ಯೋತಿ ಅಡಿಕೆ, ತುಳಜಮ್ಮಾ ಮಾನೆ,ಶಿವಲಿಲಾ, ಅನೇಕರು ಉಪಸ್ಥಿತರಿದ್ದರು.