ಸಾಹಿತಿ ಡಾ.ಕಮಲಾ ಹಂಪನಾ ಅವರಿಗೆ ಸೇಡಂನಲ್ಲಿ ಶ್ರದ್ಧಾಂಜಲಿ
ಸೇಡಂ,ಜೂ,25: ಇಲ್ಲಿನ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ನೃಪತುಂಗ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ಹಿರಿಯ ಸಾಹಿತಿ ದಿ.ಡಾ.ಕಮಲಾ ಹಂಪನಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್, ಹಾಗೂ ನೃಪತುಂಗ ಅಧ್ಯಯನ
ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ರವರು ದಿ.ಡಾ.ಕಮಲಾ ಹಂಪನಾ ಕುರಿತು ಮಾತನಾಡಿದರು. ಈ ವೇಳೆಯಲ್ಲಿ ನೃಪತುಂಗ ಅಧ್ಯಯನ ಸಂಸ್ಥೆ ಸಂರಕ್ಷಕ ಬಸವರಾಜ ಪಾಟೀಲ ಸೇಡಂ,ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ,ಪ್ರಾಚಾರ್ಯ ಬಿ.ಆರ್ ಅಣ್ಣಾಸಾಗರ,
ನೃಪತುಂಗ ಅಧ್ಯಯನ ಸಂಸ್ಥೆ ಕಾರ್ಯದರ್ಶಿ ಅವಿನಾಶ ಬೋರಂಚಿ,ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಆರತಿ
ಕಡಗಂಚಿ,ತಾಲೂಕು ಬರಹಗಾರ ಸಂಘ ಅಧ್ಯಕ್ಷೆ ರುಕ್ಕಿಣಿ ಕಾಳಗಿ, ಪ್ರಾಧ್ಯಾಪಕಿ ಅಮರಮ್ಮ ಪಾಟೀಲ, ಪ್ರಾಚಾರ್ಯ
ಚನ್ನಬಸ್ಸಪ್ಪ ಗವಿ, ವೀರಭದ್ರಪ್ಪ ಟೆಂಗಳಿ,ಶಿವಾರೆಡ್ಡಿ ಗೌಡನಹಳ್ಳಿ, ವಿಶ್ವನಾಥಕೋರಿ, ಸುರೇಶ ಬಿಜನಳ್ಳಿ, ಶಿವಪ್ರಸಾದ ವಿಶ್ವಕರ್ಮ ಇದ್ದರು.