ಅಲ್ಪಸಂಖ್ಯಾತರ ಧ್ವನಿಯಾಗಿ ಕೆಲಸ ಮಾಡಲಿ
ಸೈದಾಪುರ:ಜೂ.25:ಇವತ್ತು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಐವನ ಡಿಸೋಜ ಅವನ್ನು ಸೈದಾಪುರ ಯುವ ಮುಖಂಡರು ಸನ್ಮಾನಿಸಿ ನಂತರ ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ತಮ್ಮೆದಯಾದ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಂಡಿರುವ ಡಿಸೋಜ ಅವರನ್ನು ಪಕ್ಷದ ಮುಖಂಡರು ವಿಧಾನ ಪರಷತ್ ಸದಸ್ಯರನ್ನು ಆಯ್ಕೆ ಮಾಡಿರುವುದು ಸಂತಸವನ್ನುಂಟು ಮಾಡಿದೆ. ಅವರು ನಾಡಿನ ಹಾಗೂ ಅಲ್ಪ ಸಂಖ್ಯಾತರ ಧ್ವನಿಯಾಗಿ ಕೆಲಸ ಮಾಡಲಿ. ತಮ್ಮ ರಾಜಕೀಯ ಅನುಭವ ಬಳಸಿಕೊಂಡು ಉತ್ತಮ ಸೇವೆ ಮಾಡಲಿ ಎಂದು ಹಾರೈಸಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಜಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಹಿಂದುಳಿದ ವರ್ಗಕ್ಕೆ ಸೇರಿದ ಡಿಸೋಜ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸೈದಾಪುರ ಪಟ್ಟಣದ ಯುವ ಮುಖಂಡರಾದ ಅನಿಲಕುಮಾರ, ಮಾರುತಿ ಮುಂಡಾಸ, ಸಾಬಣ್ಣ ಸೈದಾಪುರ, ವಿಜಯಕುಮಾರ ಸೇರಿದಂತೆ ಇತರರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು.