ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಭಂಥನಾಳಶ್ರೀಗಳ ಕೊಡುಗೆ ಅಧಿಕ : ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ :ಜೂ.25: ವಿಜಯಪೂರ ಜಿಲ್ಲೆಯ ಶೈಕ್ಷಣಿ ಕ್ರಾಂತಿಗೆ ಬಂಥನಾಳದ ಶ್ರೀಸಂಗನಬಸವಶ್ರೀಗಳ ಕೊಡುಗೆ ಅನ್ಯೂನ್ಯವಾಗಿದೆ. ಇಂದು ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದಿವೆ.ಸರಕಾರಗಳು ಮಾಡದೆ ಇರುವ ಕಾರ್ಯಗಳು ನಾಡಿನಾದ್ಯೆಂತ ಮಠ ಮಾನ್ಯಗಳು, ಮಿಸಾಳೆ ಸಾಹುಕಾರರಂತ ದೂರದೃಷ್ಠಿಯ ನಾಯಕರುಗಳು ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ಶಿಕ್ಷಣದ ಹಸಿವನ್ನು ನಿಗಿಸುತ್ತಿರುವ ಕಾರ್ಯ ಶ್ಲ್ಯಾಗನೀಯ ಎಂದು ಕರ್ನಾಟಕ ಸರಕಾರದ ಅಂದಾಜು ಸಮಿತಿ ಅಧ್ಯಕ್ಷ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಶ್ರೀಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ವಿ ವಿಜ್ಞಾನ ವಿಭಾಗದ ಪ್ರಾರಂಭೋತ್ಸವ ಹಾಗೂ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು ಗಡಿ ಭಾಗ ಸಾಕಷ್ಟು ಶೈಕ್ಷಣಿಕವಾಗಿ ಹಿಂದುಳಿದಿದೆ ನನ್ನ ಅಧಿಕಾರದ ಅವಧಿಯಲ್ಲಿ ವಿಧ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಠಿಯನ್ನು ಗಮನದಲ್ಲಿಟ್ಟು ವಿವಿಧ ಕೋರ್ಸುಗಳು ಮಂಜೂರಾತಿ ತಂದಿದ್ದೇನೆ., ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮ ಝಳಕಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತಂದು ಶೈಕ್ಷಣಿಕ ಹಬ್ಬ ಮಾಡಿರುವೆ. ಇಂಡಿ ಪಟ್ಟಣದಲ್ಲಿ ಕೂಡಾ ವಿಜಯಪೂರ ರಸ್ತೆಯಲ್ಲಿ ಆದರ್ಶ ಶಾಲೆ, ಐಟಿಆಯ್ ಕಾಲೇಜು, ಡಿಗ್ರೀ ಕಾಲೇಜು ,ಅಲ್ಪಸಂಖ್ಯಾತ ವಸತಿ ನಿಲಯ ಹೀಗೆ ಶಿಕ್ಷಣ ಕಾಶಿಯಂತೆ ಕಂಗೋಳಿಸುತ್ತಿದೆ. ಒಂದು ಶಿಕ್ಷಣ ಸಂಸ್ಥೆ ತೆರೆಯಬೇಕಾದರೆ ಸಾಕಷ್ಟು ತೊಂದರೆಗಳು ಬರುತ್ತವೆ. ಮಿಸಾಳೆ ಸಾಹುಕಾರ ಈ ಭಾಗದಲ್ಲಿ ಬಡವರ ಅತ್ಯೆಂತ ಹಿಂದುಳಿದ ವಿಧ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದೆ ಬರಲಿ ಎಂಬ ಸದಾಶೇಯದೊಂದಿಗೆ ಭೂಧಾನ ಮಾಡಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ ಇಂತಹ ಹೃದಯವಂತರಿರುವದರಿಂದಲೆ ಈ ಭಾಗ ಶಾಂತಿ ,ನೆಮ್ಮದಿ ,ಸಾಮರಸ್ಯದ ಬದುಕಿಗೆ ದಾರಿಯಾಗಿದೆ. ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಬೆಳವಣಿಗೆಯಾಗಲಿ ಇಲ್ಲಿ ಕಲಿತ ವಿಧ್ಯಾರ್ಥಿಗಳು ಭವಿಷ್ಯದ ಒಳ್ಳೇಯ ಉನ್ನತ ಹುದ್ದೆ ಹೊಂದಿ ಸಮಾಜದ , ದೇಶ ಖುಣ ತೀರಿಸುವ ಸತ್ಪ್ರಜೆಗಳಾಗಲಿ ಎಂದ ಅವರು ಮುಂಬರುವ ದಿನಗಳಲ್ಲಿ ಸರಕಾರದ ಅನುಧಾನದ ಅನುಪಾತದ ಮೇಲೆ ನನ್ನ ಕೈಲಾದ ಮಟ್ಟಿಗೆ ಸಹಾಯ ಸಹಕಾರ ಮಾಡುವ ಭರವಸೆ ನೀಡಿದರು.
ನಾಗಠಾಣಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶ್ರೀಸಿದ್ರಾಮೇಶ್ವರ ಪಟ್ಟದೇವರು ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು, ಮಾಹಾಂತಯ್ಯಾಸ್ವಾಮಿ ಹಿರೇಮಠ ತದ್ದೇವಾಡಿ ಸಾನಿಧ್ಯವಹಿಸಿದರು.
ಸಾಂಬಾಜಿರಾವ ಮಿಸಾಳೆ, ಬಿ.ಎಂ ಕೋರೆ, ರುಕ್ಮುದೀನ ತದ್ದೇವಾಡಿ, ರಾಜಕುಮಾರ ಕಾಡೆ, ಬಸವರಾಜ ಹಳಕೆ, ಸಿದ್ದರಾಮ ನಿಚ್ಚಳ, ಶಿವಾಜಿ ಸಿಂಧೆ, ಮಾಹಾದೇವ ಪವಾರ, ಸುರೇಶ ಜೇವರಗಿ, ಶಿಕ್ಷಕ ಆರ್.ಎಸ್ ಗುಂದವಾನ, ರಂಜಿತ ಬಾಬಾರ, ಸುಬಾಷ ಬಾಬರ ಸೇರಿದಂತೆ ಗ್ರಾಮಸ್ಥರು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ,ಕಾಲೇಜ ಪ್ರಾಚಾರ್ಯರರು ,ಉಪನ್ಯಾಸಕರು ಆಡಳಿತ ಮಂಡಳಿಯ ಸರ್ವಪದಾಧಿಕಾರಿಗಳು ಉಪಸ್ಥಿತರಿದ್ದರು.