ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸುನಂದಾ ವಾಲಿಕಾರ ಆಯ್ಕೆ
ಇಂಡಿ:ಜೂ.25:ತಾಲೂಕಿನ ತಡವಲಗಾ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ರವಿ ಹೊಸಮನಿ ರಾಜಿನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಸುನಂದಾ ವಾಲಿಕಾರ ಆಯ್ಕೆಯಾಗಿದ್ದರೆ ಎಂದು ಚುನಾವಣಾಧಿಕಾರಿ ಬಾಬು ರಾಠೋಡ ಘೋಷಿಸಿದ್ದಾರೆ.
ತಡವಲಗಾ ಗ್ರಾಮ ಪಂಚಾಯಿತಿಗೆ ಒಟ್ಟು 29 ಜನ ಸದಸ್ಯ ಬಲವಿದ್ದು,ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಮಳಸಿದ್ದಪ್ಪ ಕರಕಟ್ಟಿ ಹಾಗೂ ಸುನಂದಾ ವಾಲಿಕಾರ ಇಬ್ಬರು ನಾಮಪತ್ರ ಸಲ್ಲಿಸಿದ್ದರು.ಮತದಾನದ ವೇಳೆಯಲ್ಲಿ ಸುನಂದಾ ವಾಲಿಕಾರ ಅವರಿಗೆ 18 ಮತಗಳು ಹಾಗೂ ಮಳಸಿದ್ದಪ್ಪಾ ಕರಕಟ್ಟಿ ಅವರಿಗೆ 11 ಮತಗಳು ಲಭಿಸಿದ್ದವು. ಹೆಚ್ಚು ಮತಗಳನ್ನು ಪಡೆದುಕೊಂಡಿರುವ ಸುನಂದಾ ವಾಲಿಕಾರ ಅಧ್ಯಕ್ಷರಾಗಿ ಆಯ್ಕೆಯಾದರು.ಚುನಾವಣಾ ಕರ್ತವ್ಯದಲ್ಲಿ ಅಪ್ಪಾಸಾಹೇಬ ಲಾಳಸೇರಿ,ಗ್ರಾಪಂ ಪಿಡಿಒ ಇದ್ದರು.