ಭಾರತೀಯತೆ ಆಧಾರಿತ ಶಿಕ್ಷಣ ಅಗತ್ಯ
ಬೀದರ್:ಜೂ.25: ಶ್ರೇಷ್ಠ ಭಾರತೀಯ ಸಂಸ್ಕøತಿಯ ಉಳಿವಿಗೆ ಭಾರತೀಯತೆ ಆಧಾರಿತ ಶಿಕ್ಷಣ ಅಗತ್ಯವಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಿ.ಎಸ್. ಬಿರಾದಾರ ಹೇಳಿದರು.
ನಗರದ ಸರಸ್ವತಿ ವಿದ್ಯಾಮಂದಿರದಲ್ಲಿ ಭಾನುವಾರ ನಡೆದ ಭಾರತೀಯ ಶಿಕ್ಷಣ ಮಂಡಲದ ಬೀದರ್ ಜಿಲ್ಲಾ ಘಟಕದ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಕೌಶಲಕ್ಕೂ ಪ್ರಾಮುಖ್ಯ ನೀಡಬೇಕಿದೆ ಎಂದು ತಿಳಿಸಿದರು.
ಭಾರತೀಯ ಸಂಸ್ಕøತಿ ಬೆಳೆಸುವ ದಿಸೆಯಲ್ಲಿ ಭಾರತೀಯತೆ ಆಧಾರಿತ ಶಿಕ್ಷಣ ಕೊಡುತ್ತಿರುವ ಭಾರತೀಯ ಶಿಕ್ಷಣ ಮಂಡಲದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವಿಶ್ರಾಂತ ಕುಲಪತಿಯೂ ಆದ ನವದೆಹಲಿಯ ಎನ್.ಸಿ.ಟಿ.ಇ. ದಕ್ಷಿಣ ವಲಯ ಅಧ್ಯಕ್ಷೆ ಪೆÇ್ರ. ಮೀನಾ ಚಂದಾವರಕರ್ ಮಾತನಾಡಿ, ಶಿಕ್ಷಣ ಗೃಹ ಕೈಗಾರಿಕೆ ಕೌಶಲವನ್ನೂ ಬೆಳೆಸಬೇಕಿದೆ. ಈ ಹಿನ್ನೆಲೆಯಲ್ಲಿ ಮಂಡಲವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಾಗ ಸೂಕ್ತ ಸಲಹೆಗಳನ್ನು ನೀಡಿದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯದರ್ಶಿಗಳಾದ ಸಿದ್ದು ಮದರಕಂಡಿ, ಡಾ. ಪಲ್ಲವಿ ಪಾಟೀಲ, ಪ್ರಮುಖರಾದ ಡಾ. ಹೇಮಂತಕುಮಾರ ಕಪ್ಪಾಳಿ, ಶೈಕ್ಷಣಿಕ ಪ್ರಕೋಷ್ಠದ ಪ್ರಮುಖ ವೀರಯ್ಯ ಮುತ್ತಿನಮಠ, ಪ್ರಾಂತ ಮಹಿಳಾ ಪ್ರಕಲ್ಪದ ಪ್ರಮುಖರಾದ ಪ್ರತಿಭಾ ಚಾಮಾ ಉಪಸ್ಥಿತರಿದ್ದರು.
ಮಂಡಲದ ಜಿಲ್ಲಾ ಘಟಕದ ಕೋಶ ಪ್ರಮುಖರಾದ ರಾಧಾ ಬಿರಾದಾರ ನಿರೂಪಿಸಿದರು. ಶಾಲಾ ಪ್ರಕಲ್ಪದ ಪ್ರಮುಖ ಬಾಲಾಜಿ ರಾಠೋಡ್ ವಂದಿಸಿದರು