ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ
ಬೀದರ:ಜೂ.25:ಸರ್ಕಾರಿ ಪ್ರಥಮದರ್ಜೆಕಾಲೇಜು ಬೀದರ ಹಾಗೂ ಬೀದರ ವಿಶ್ವವಿದ್ಯಾಲಯ ಬೀದರಇವರ ಸಂಯುಕ್ತಆಶ್ರಯದಲ್ಲಿ ಹಮ್ಮಿಕೊಂಡಿರುವರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಬೀದರ್ ವಿಶ್ವವಿದ್ಯಾಲಯ ಬೀದರನ ಸಮಾಜ ನಿಕಾಯದಡೀನರು ಹಾಗೂ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆಕಾಲೇಜುಕಾಲೇಜು ಗೋಡಂಪಳ್ಳಿಯ ಪ್ರಾಂಶುಪಾಲರಾದ ಪೆÇ್ರ.ದೇವಿದಾಸತುಮಕುಂಟೆಅವರು ಮಾತನಾಡುತ್ತಾ ‘ಇಂದಿನ ಯುವಕರೇ ನಾಳಿನ ನಾಗರಿಕರು ಹಾಗಾಗಿ ಎಲ್ಲಾಯುವಕರ ಮೇಲೆ ಗುರುತರವಾದಂತಹಜವಾಬ್ದಾರಿಇದೆ. ಹೆತ್ತತಾಯಿ, ಹೊತ್ತ ಭೂಮಿಇವೆರಡು ಸ್ವರ್ಗಕ್ಕೆ ಸಮಾನ. ಹಾಗಾಗಿ ನಾವು ಅವರ ಸಂರಕ್ಷಣೆ ಮಾಡುವುದು ಮತ್ತುಗುರು ಹಿರಿಯರನ್ನುಗೌರವದಿಂದ ನೋಡಿಕೊಳ್ಳಬೇಕು ಎಂದು ಹೇಳಿದರು. ಇಂತಹ ಶಿಬಿರಗಳು ನಮ್ಮಲ್ಲಿರಾಷ್ಟ್ರೀಯ ಭಾವೈಕ್ಯತೆ, ಸಮಾನತೆ, ಸಹೋದರತೆ, ಸಹ ಬಾಳ್ವೆ , ಸಪಂಕ್ತಿ ಭೋಜನಇಂಥಉದಾರವಾದ ಗುಣಗಳನ್ನು ಬೆಳೆಸುತ್ತವೆ. ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಶೀರ್ಷಿಕೆಡಿಯಲ್ಲಿ ನಾವು ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಸಮಾಜದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಆಗÀ ಮಾತ್ರ ಸಕಾಲಕ್ಕೆ ಮಳೆ ಬೆಳೆಯು ಆಗುತ್ತವೆ. ಇಲ್ಲವಾದಲ್ಲಿ ಮುಂದೊಂದು ದಿನ ಕುಡಿಯುವ ನೀರಿಲ್ಲದೆ ಬವಣೆಗೆ ಸಿಲುಕಬಹುದುಎಂದರು.
ಸಮಾರಂಭದಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸರ್ಕಾರಿ ಪ್ರಥಮದರ್ಜೆಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಜಯಶ್ರೀ ಪ್ರಭಾಅವರು ಮಾತನಾಡುತ್ತ ಮಾಧ್ಯಮಗಳ ಪ್ರಭಾವದಿಂದಾಗಿಇಂದು ನಾವು ಸ್ವದೇಶಿ ಸಂಸ್ಕøತಿಯನ್ನು ಬಿಟ್ಟು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಇಂತಹ ಸಂಸ್ಕೃತಿಯಿಂದ ನಮ್ಮ ಸಮಾಜ ಹಾಳಾಗಿ ಹೋಗುತ್ತದೆ. ಹಾಗಾಗಿ ಇವತ್ತು ನೀವು ಸ್ವದೇಶಿಯ ಸಂಸ್ಕೃತಿ, ಇಲ್ಲಿಯರೀತಿ ನೀತಿ, ನಡೆ ನುಡಿ ಬಗ್ಗೆ ಕಳಕಳಿ ಉಳ್ಳವರಾದಾಗ ಮಾತ್ರತಾವು ಮುಂದೆ ಸತ್ಪ್ರಜೆಯಾಗಲು ಸಾಧ್ಯವಾಗುತ್ತದೆಎಂದರು.
ಆರಂಭದಲ್ಲಿರಾಷ್ಟ್ರೀಯ ಸೇವಾ ಯೋಜನೆಘಟಕದ ಸಂಯೋಜಕರಾದಡಾ.ಸುಚಿತಾನಂದ ಕೆ.ಮಲ್ಕಾಪುರಅವರು ಸರ್ವರನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಪರಿಸರ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಮತ್ತುರಾಷ್ಟ್ರೀಯ ಪ್ರಜ್ಞೆ ಹೀಗೆ ಹಲವು ಹತ್ತು ಜವಾಬ್ದಾರಿಗಳನ್ನು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ಚಾಚು ತಪ್ಪದೆಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದಾಗ ಮಾತ್ರತಾವುಅಭ್ಯಾಸ ಮಾಡಿದ್ದುಇಂತಹ ಶಿಬಿರಗಳಲ್ಲಿ ಭಾಗಿಯಾಗಿದ್ದು ಸಾರ್ಥಕವಾಗುತ್ತದೆಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರುಇಂತಹ ಅನೇಕ ಆದರ್ಶ ಗುಣಗಳನ್ನು ತಮ್ಮಜೀವನದಲ್ಲಿ ಅಳವಡಿಸಿಕೊಂಡು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕುಎಂದರು.ಮುಂದುವರೆದು ನಾವೆಲ್ಲರೂಆರೋಗ್ಯದಿಂದಇರಬೇಕಾದರೆ ಸ್ವದೇಶಿ ವಸ್ತುಗಳಿಗೆ ಒತ್ತುಕೊಡಬೇಕಾಗುತ್ತದೆಅದರಲ್ಲಿ ವಿಶೇಷವಾಗಿ ಮಜ್ಜಿಗೆ ,ನಿಂಬು ಶರಬತ್ತು ಎಳೆ ನೀರುಹೀಗೆ ನಮ್ಮ ಸುತ್ತಮುತ್ತಲಿರುವ ಪದಾರ್ಥಗಳನ್ನು ಸೇವಿಸಿದಾಗ ಮಾತ್ರ ನಮ್ಮಆರೋಗ್ಯ ವೃದ್ಧಿಯಾಗಲಿಕ್ಕೆ ಸಾಧ್ಯವಾಗುತ್ತದೆಎಂದರು.
ರಾಷ್ಟ್ರೀಯ ಸೇವಾ ಯೋಜನೆಘಟಕದ ಸಲಹಾ ಸಮಿತಿಯ ಸದಸ್ಯರಾದ ಪೆÇ್ರ. ಏಲಿಶಾ ದೇವಿದಾಸ್‍ಅವರುಕಾರ್ಯಕ್ರಮ ನಿರೂಪಿಸಿದರು ರಾಷ್ಟ್ರೀಯ ಸೇವಾ ಯೋಜನೆಘಟಕದ ಸಂಚಾಲಕರಾದಡಾಕ್ಟರ್‍ಗಿರಿಜಾ ಮಂಗಳಗಟ್ಟಿ ಅವರುಕೊನೆಯಲ್ಲಿ ವಂದಿಸಿದರು.ಕಾರ್ಯಕ್ರಮದಲ್ಲಿರಾಷ್ಟ್ರೀಯ ಸೇವಾ ಯೋಜನೆಘಟಕದ ಸಲಹಾ ಸಮಿತಿಯ ಸದಸ್ಯರುಗಳಾದ ಡಾ.ರಾಜಕುಮಾರಅಲ್ಲೂರೆ ಡಾ.ಚನ್ನಕೇಶವಮೂರ್ತಿ,ಪೆÇ್ರ.ಪಲ್ಲೆದ ಮಹೇಶ್ವರಿಡಾ.ನಾಗಮ್ಮ ಬಂಗರಗಿ ಪೆÇ್ರ. ಶ್ರೀಕಾಂತ್ ಪಾಟೀಲ್ , ಪೆÇ್ರ.ಸಪ್ನಾ ಮಾನಕಾರಿ, ಡಾ.ಶೀಲಾ ಎಸ್.ಎನ್, ಶ್ರೀ ಬಾಲಸುಬ್ರಮಣ್ಯಂ ಚಾಲಾಕ ಡಾ. ನಗ್ಮಾ ಸೋಣಾ ಮತ್ತುಡಾ. ಜೈಭಾರತ ಎಂ. ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಉಪಸ್ಥಿತರಿದ್ದರು.