ಮಕ್ಕಳ ಸವಾರ್ಂಗೀಣ ಬೆಳವಣಿಗೆಗೆ ಯೋಗ ಸಹಕಾರಿ:ಯೋಗ ಗುರು ಬಿರಾದಾರ
ಆಳಂದ:ಜೂ.25:ಸ ಹಿ ಪ್ರಾಥಮಿಕ ಶಾಲೆ ತೀರ್ಥನಲ್ಲಿ. ಲುಸೆಂಟ ಸ್ಟಾರ ಶಾಲೆ ಮತ್ತು ಭೋಧಿ ವೃಕ್ಷ ಶಾಲೆಯ ಸಹಭಾಗಿತ್ವದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು
ಎಮ್ ಎ ಆರ್ ಜಿ.ಸ್ಮಾ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಮತ್ತು ಯೋಗ ಶಿಕ್ಷಕ ದತ್ತಾತ್ರೇಯ ಬಿರಾದಾರ ಮಕ್ಕಳಿಗೆ ಯೋಗ ಪ್ರಾಣಾಯಾಮ ಧ್ಯಾನದ ಬಗ್ಗೆ ಹೆಳಿ ಕೊಟ್ಟರು, ಮಕ್ಕಳ ಮಾನಸಿಕ ಮತ್ತು ಶಾರೀರಿಕ ಬಲವರ್ದನೆಗೆ ಯೋಗ ತುಂಬಾ ಸಹಕಾರಿಯಾಗಿದೆ, ಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಯೋಗ ಸಹಾಯ ಮಾಡುತ್ತದೆ ಎಂದರು.
ಸ ಹಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶಿವಶರಣಪ್ಪ , ಲುಸೆಂಟ ಸ್ಟಾರ ಶಾಲೆಯ ಮುಖ್ಯ ಗುರುಗಳಾದ ಮಹೇಶ ಪಾಟೀಲ ಮತ್ತು ಶಾಲೆಯ ಸಿಬ್ಬಂದಿಗಳು,ವಿದ್ಯಾರ್ಥಿಗಳು ಯೋಗ ಅಭ್ಯಾಸ ಮಾಡಿದರು.