ಜಯದೇವಿತಾಯಿ ಕರುನಾಡ ಸಾಂಸ್ಕøತಿಕ ರಾಯಭಾರಿ
ಬೀದರ್:ಜೂ.25: ಜಯದೇವಿತಾಯಿ ಲಿಗಾಡೆ ಕರುನಾಡ ಸಾಂಸ್ಕøತಿಕ ರಾಯಭಾರಿ ಆಗಿದ್ದರು ಎಂದು ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ನುಡಿದರು.
ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಜಯದೇವಿತಾಯಿ ಲಿಗಾಡೆ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾವ, ಭಾಷೆ, ಸಂಸ್ಕøತಿಗೆ ಗಡಿ ಇಲ್ಲ ಎನ್ನುವುದನ್ನು ತೋರಿದ್ದರು. ಕನ್ನಡ, ಮರಾಠಿಯಲ್ಲಿ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದರು. ಕನ್ನಡದ ವಚನ ಹಾಗೂ ಶೂನ್ಯ ಸಂಪಾದನೆಯನ್ನು ಮರಾಠಿಗೆ ಅನುವಾದ ಮಾಡಿದ್ದರು ಎಂದು ತಿಳಿಸಿದರು.
ಸಮೃದ್ಧ ಕರ್ನಾಟಕಾಂಚಿ ರೂಪ ರೇಷ ಕೃತಿ ಬರೆದು ಮರಾಠರಿಗೆ ಕರ್ನಾಟಕದ ಸಾಂಸ್ಕøತಿಕ ಚರಿತ್ರೆಯನ್ನು ಪರಿಚಯಿಸಿದ್ದರು. ಬಸವ ದರ್ಶನ, ಮಹಾಯೋಗಿನಿ ಅಕ್ಕ ಮಹಾದೇವಿ ಸಿದ್ಧರಾಮಾಂಚಿ ತ್ರಿವಿಧಿ, ಬಸವ ವಚನಾಮೃತ ಮೊದಲಾದ ಕೃತಿಗಳನ್ನು ಮರಾಠಿಗೆ ತರ್ಜುಮೆ ಮಾಡಿದ್ದರು. ಕನ್ನಡ ಮತ್ತು ಮರಾಠಿ ಮಧ್ಯೆ ಸಾಂಸ್ಕøತಿಕ ಸಾಮರಸ್ಯ, ಭಾಷಿಕ ಸಮನ್ವಯ ತಂದರು ಎಂದು ಬಣ್ಣಿಸಿದರು.
ಭಾಷಾವಾರು ಪ್ರಾಂತ ರಚನೆಗೆ ಮುನ್ನ ಕನ್ನಡದ ಮಹತ್ವದ ನೆಲವಾಗಿದ್ದ, ಇಂದಿನ ಮಹಾರಾಷ್ಟ್ರದ ಸೋಲಾಪುರದಲ್ಲಿ ಜನಿಸಿದ ಜಯದೇವಿತಾಯಿ, ಕನ್ನಡ ಹಾಗೂ ಮರಾಠಿ ಭಾಷೆ ಮೇಲೆ ಪ್ರಭುತ್ವ ಹೊಂದಿದ್ದರು ಎಂದು ಹೇಳಿದರು.
ಲಿಗಾಡೆ ಅವರು ತಾತ್ವಿಕವಾಗಿ ಬಸವಣ್ಣ, ಆಧ್ಯಾತ್ಮಿಕವಾಗಿ ಸಿದ್ಧರಾಮ ಹಾಗೂ ರಾಷ್ಟ್ರೀಯತೆ ವಿಚಾರದಲ್ಲಿ ಗಾಂಧೀಜಿ ಅವರಿಂದ ಪ್ರಭಾವಿತರಾಗಿದ್ದರು. ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ್ದರು. ಕನ್ನಡ ಸೇವೆಗೆ ಕಂಕಣ ಬದ್ಧರಾಗಿ ನಿಂತಿದ್ದರು ಎಂದು ತಿಳಿಸಿದರು.
ಜಯದೇವಿತಾಯಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆಯಾದ ಹೆಗ್ಗಳಿಗೆ ಅವರದ್ದಾಗಿತ್ತು. ಅವರ ಜೀವನ ಚರಿತ್ರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಬಸವಕಲ್ಯಾಣದಲ್ಲಿನ ಅವರ ಸಮಾಧಿಯನ್ನು ಸ್ಮಾರಕವಾಗಿಸುವ ಅಗತ್ಯವಿದೆ ಎಂದು ಹೇಳಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಜಯದೇವಿತಾಯಿ ಅವರ ಕನ್ನಡ ಪ್ರೇಮ ಮಾದರಿಯಾಗಿದೆ. ಅವರ ಸಾಹಿತ್ಯ ಹಾಗೂ ಸಮಾಜ ಸೇವೆ ಮಕ್ಕಳಿಗೆ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಜಯಂತಿ ಹಮ್ಮಿಕೊಳ್ಳಲಾಗಿದೆ. ಇನ್ನು ಶಾಲೆಯಲ್ಲಿ ಪ್ರತಿ ವರ್ಷ ಅವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಶಿವರಾಜ ಹುಡೇದ್, ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ, ಪ್ರೌಢಶಾಲೆ ಮುಖ್ಯಶಿಕ್ಷಕ ರಾಹುಲ್, ವಿಕಾಸ ಅಕಾಡೆಮಿ ಜಿಲ್ಲಾ ಸಂಯೋಜಕ ಬಸವರಾಜ ಅಷ್ಟಗಿ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ನಿರೂಪಿಸಿದರು. ಶಿಕ್ಷಕಿ ರೇಣುಕಾ ವಂದಿಸಿದರು.