ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ: ಸಂವಾದ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೫: ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದು ಭಾರತದ ಸಂವಿಧಾನ, ಪ್ರಜಾತಂತ್ರಕ್ಕೆ ಇಟ್ಟಂತಹ ಅತ್ಯಂತ ದೊಡ್ಡ ಕಪ್ಪು ಬೊಟ್ಟು ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.ನಗರದ ದಾವಣಗೆರೆ -ಹರಿಹರ ಸಹಕಾರ ಸಮುದಾಯ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವತಿಯಿಂದ  ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ ವಿಷಯ ಕುರಿತು ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದರು.ಇಂದಿರಾಗಾಂಧಿಯವರು ರಾಯ್ ಬರೇಲಿ ಯಲ್ಲಿ ಗೆದ್ದಿದ್ದು ಅಸಿಂಧು ಎಂಬುದಾಗಿ ಅಲಹಾಬಾದ್ ನ್ಯಾಯಾಲಯದ ನ್ಯಾಯಾಧೀಶರಾದ ಜಗನ್ ಮೋಹನ್ ಶರ್ಮ ನೀಡಿದ ತೀರ್ಪಿನ ಸಂಬಂಧ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ತಿಳಿಸಿದರು.ಈ ವೇಳೆ ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿ ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ನ್ಯಾಯವಾದಿ ವಿವೇಕ್ ರೆಡ್ಡಿ, ದಾವಣಗೆರೆ ಹರಿಹರ ಅರ್ಬನ್ ಸಹಕಾರ ಸಮುದಾಯ ಭವನ ಅಧ್ಯಕ್ಷ ಎನ್. ಮುರುಗೇಶ್ ಆರಾಧ್ಯ ಇತರರು ಇದ್ದರು.