ಬಜಾಜ್ ಕಂಪನಿಯ ವಿದ್ಯುತ್ ಚಾಲಿತ ಆಟೋಗೆ ಸಬ್ಸಿಡಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೨೫; ಪರಿಸರಸ್ನೇಹಿ ಬಜಾಜ್‌ ಕಂಪನಿ ಆಟೊಗಳು ದೇಶಕ್ಕೆ ಮಾದರಿಯಾಗಿವೆ ಎಂದು ಆರ್‌ಟಿಒ ಅಧಿಕಾರಿ ಪ್ರಮುತೇಶ್‌ ತಿಳಿಸಿದರು.ನಗರದ ಪಿ.ಬಿ.ರಸ್ತೆಯಲ್ಲಿರುವ ಗುರು ಮೋಟಾರ್ಸ್‌ ಶೋ ರೂಂನಲ್ಲಿ ನೂತನ ವಿದ್ಯುತ್‌ಚಾಲಿತ ಆಟೋ ಹಾಗೂ ಗೂಡ್ಸ್‌ ಆಟೊ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಉತ್ಪನ್ನಗಳ ಗುಣಮಟ್ಟದಲ್ಲಿ ಬಜಾಜ್‌ ಆಟೋಗೆ ಸರಿಸಾಟಿ ಇಲ್ಲ ಎಂದು ಹೇಳಿದರುವಿದ್ಯತ್‌ಚಾಲಿತ ಆಟೊಗೆ ₹ 3.40 ಲಕ್ಷ ಹಾಗೂ ಗೂಡ್ಸ್‌ ಆಟೊಗೆ ₹ 4.50 ಲಕ್ಷ ಬೆಲೆ ಇದೆ. ಈ ಎರಡೂ ವಾಹನಗಳ ಖರೀದಿಗೆ ಸರ್ಕಾರದಿಂದ ₹ 30,000 ಸಬ್ಸಿಡಿ ಸಿಗಲಿದೆ. ಮೂರೂವರೆ ಗಂಟೆ ಚಾರ್ಜ್‌ ಮಾಡಿಕೊಂಡರೆ ಆಟೊ 178 ಕಿ.ಮೀ. ಹಾಗೂ ಗೂಡ್ಸ್‌ ಆಟೊ 183 ಕಿ.ಮೀ. ಮೈಲೇಜ್‌ ನೀಡಲಿದೆ. ಪರಿಸರದ ದೃಷ್ಟಿಯಿಂದ ಎಲೆಕ್ಟ್ರಿಕಲ್‌ ವಾಹನಗಳ ಬಳಕೆ ಸೂಕ್ತ ಎಂದು ಗುರು ಮೋಟಾರ್ಸ್‌ನ ಎಂ.ಡಿ. ಎನ್‌.ಜಿ.ಸಿದ್ದೇಶ್‌ ತಿಳಿಸಿದರು. ರೀಜನಲ್‌ ಸೇಲ್ಸ್‌ ಮ್ಯಾನೇಜರ್‌ ರಾಘವೇಂದ್ರ, ರೀಜನಲ್‌ ಸರ್ವೀಸ್‌ ಮ್ಯಾನೇಜರ್‌ ಅನಂತ ಪದ್ಮನಾಭ, ಸರ್ವೀಸ್‌ ಮ್ಯಾನೇಜರ್‌ ನೇಹಾ, ಆರ್‌ಟಿಒ ಇನ್‌ಸ್ಪೆಕ್ಟರ್‌ ಖಾಲಿದ್‌, ಸುಮನ್‌ ಸಿದ್ದೇಶ್‌, ಹನುಮಂತರಾವ್‌ ಶಿಂಧೆ, ಬಸವರಾಜ್‌ ಹಾಗೂ ಗುರು ಮೋಟಾರ್ಸ್‌ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.