ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೫: ಭಗತ್ ಸಿಂಗ್ ಯುವ ಬ್ರಿಗೇಡ್ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಆವರಗೆರೆ ಗ್ರಾಮದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ 250 ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ ಅರ್ಧ ಡಜನ್ ನೋಟ್ ಬುಕ್ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜಸೇವಕ ಶ್ರೀನಿವಾಸ ದಾಸಕರಿಯಪ್ಪ ಮಾತಾಡಿ, ಚೆನ್ನಾಗಿ ಓದಿ ಜೀವನದಲ್ಲಿ ಎತ್ತರದ ಮಟ್ಟಕ್ಕೆ ಬೆಳೆಯಬೇಕು. ಆಗ ನಿಮ್ಮಿಂದ ಮತ್ತಷ್ಟು ಬಡಜನರಿಗೆ ಸಹಾಯ ಮಾಡಲು ಸಾಧ್ಯವಾಗಯತ್ತದೆ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಬಿಜೆಪಿ ಮುಖಂಡರಾದ ರಾಜು ನೀಲಗುಂದ, ಗುರುರಾಜ್, ಭಗತ್ ಸಿಂಗ್ ಯುವ ಬ್ರಿಗೇಡ್ ನ  ಅಧ್ಯಕ್ಷರಾದ ಸಚಿನ್ ಕುಮಾರ್, ವಿನಯ್ ಚಿಗಟೇರಿ, ಕಿಶನ್, ಶ್ಯಾಮಸುಂದರ, ಅಜಯ್, ನಂದೀಶ್, ಕೆ.ಎನ್. ಸನತ್, ಆರ್, ಭರತ್, ಪ್ರಜ್ವಲ್, ನಾಗರಾಜ್ ಚಿಗಟೇರಿ, ಪ್ರಶಾಂತ್ ಉಪಸ್ಥಿತರಿದ್ದರು.