ರಾಜೀಯಾಗುವಂತಹ ಪ್ರಕರಣ ಲೋಕ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಿ
ಸಂಜೆವಾಣಿವಾರ್ತೆ
ಹರಪನಹಳ್ಳಿ.ಜೂ.೨೫:  ವಕೀಲರುಗಳು  ರಾಜೀಯಾಗುವಂತಹ ಪ್ರಕಣಗಳ ಬಗ್ಗೆ ನಿಮ್ಮ ಕಕ್ಷಿದಾರರಿಗೆ ತಿಳಿಸಿ ಪೂರ್ವ ಸಿದ್ದತೆಯನ್ನು ಮಾಡಿಕೊಂಡು  ಲೋಕಾದಾಲತ್  ಬಗೆಹರಿಸಿಕೊಳ್ಳಿ ಎಂದು  ಹಿರಿಯ ಸಿವಿಲ್  ನ್ಯಾಯಾಲಯದ ನ್ಯಾಯಾಧೀಶರಾದ ಸಿವಿಲ್ ನ್ಯಾಯಾಧೀಶರಾದ  ಉಷಾರಾಣಿ ಆರ್. ಹೇಳಿದರು.ಪಟ್ಟಣದ  ನ್ಯಾಯಾಲಯದ ಆವರಣದಲ್ಲಿ   ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಹರಪನಹಳ್ಳಿ ಇವರ ಸಂಯುಕ್ತಾಶ್ರದಲ್ಲಿ  ಸಾರ್ವಜನಿಕರಿಗೆ ಮತ್ತು ಕಕ್ಷಿದಾರರಿಗೆ ಲೋಕಾದಾಲತ್   ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಜುಲೈ 13  ರಂದು   ನಡೆಯಲಿರುವ ರಾಷ್ಟ್ರೀಯ ಲೋಕದಾಲತ್ನಲ್ಲಿ  ಸಾರ್ವಜನಿಕ ಕಕ್ಷಿದಾರರಿಗೆ ವಕೀಲರುಗಳು ಮನ ಮುಟ್ಟುವಂತೆ ತಿಳುವಳಿಕೆ ಹೇಳಿ  ರಾಜೀವಾಗುವಂತಹ ಪ್ರಕರಣಗಳನ್ನು ಇತ್ಯಾರ್ಥಪಡಿಸಿಕೊಳ್ಳಲು  ಕಕ್ಷಿದಾರರಿಗೆ ತಿಳಿಸಿ ಎಂದು ವಕೀಲರುಗಳಿಗೆ  ಸಲಹೆ ನೀಡಿದರು.ಸಿವಿಲ್ ನ್ಯಾಯಾಧೀಶರಾದ ಮನು ಶರ್ಮ ಎಸ್.ಪಿ. ಮಾತನಾಡಿ,  ಕಕ್ಷಿದಾರರು ಮುಕ್ತ ಮನಸ್ಸಿನಿಂದ ಸಣ್ಣ ಪುಟ್ಟ ಪ್ರಕರಣಗಳನ್ನು ರಾಜೀ ಮಾಡಿಕೊಂಡಗ ನಿಮ್ಮ ಮಕ್ಕಳ ಭವಿಷ್ಯ ಉಜ್ಜಲವಾಗಿತ್ತದೆ ನಿಮ್ಮ ಕುಟುಂಬ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುತ್ತದೆ. ದ್ವೇಷದಿಂದ ಏನು ಸಾಧನೆ ಮಾಡಲು ಆಗುವದಿಲ್ಲ ಪ್ರೀತಿ ವಿಶ್ವಾಸದಿಂದ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳುವುದಕ್ಕೆ ಸಾಧ್ಯವಾಗುತ್ತದೆ. ಎಂದರು.ಈ ಸಂದರ್ಭದಲ್ಲಿ   ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೇಲ್ ಮಾತನಾಡಿ,   ಉಪಾಧ್ಯಕ್ಷ ಸಿ. ಪೀರ್ ಅಹಮ್ಮದ್, ಕಾರ್ಯದರ್ಶಿ.ಜಿ.ಎಸ್.ಎಂ. ಕೊಟ್ರಯ್ಯ, ಸರ್ಕಾರಿ ಅಭಿಯೋಜಕಿ ಎನ್. ಮಿನಾಕ್ಷೀ   ವಕೀಲರುಗಳಾದ ಎಂ.ಮೃತಂಜಯ್ಯ,  ಸೇರಿದಂತೆ ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು ಹಾಜರಿದ್ದರು.