ಅಹಿಂದ  ಜಿಲ್ಲಾ ಉಪಾಧ್ಯಕ್ಷರಾಗಿ ಎಂ. ಮನು ಆಯ್ಕೆ
ಸಂಜೆವಾಣಿ ವಾರ್ತೆ
ದಾವಣಗೆರೆ ಜೂ.೨೫; – ಅಹಿಂದ ಸಂಘಟನೆ ರಾಜ್ಯ ಅಧ್ಯಕ್ಷರಾದ ಪ್ರಭುಲಿಂಗ ಎಲ್  ದೊಡ್ಡಿನಿ   ಇವರ ಆದೇಶದ ಮೇರೆಗೆ  ದಾವಣಗೆರೆ ಜಿಲ್ಲಾ ಅಹಿಂದ ಉಪಾಧ್ಯಕ್ಷರಾಗಿ   ಎಂ.ಮನು ಅವರನ್ನು  ಆಯ್ಕೆ ಮಾಡಲಾಗಿದೆ ತಾವುಗಳು   ಜಿಲ್ಲಾ ಮತ್ತು ರಾಜ್ಯದ್ಯಂತ  ಸಂಚಾರ ಮಾಡಿ ಸಂಘಟನೆ ಮಾಡಬೇಕೆಂದು ಆದೇಶಿಸಲಾಗಿದೆ  ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟ  (ರಿ ) ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರನ್ನಾಗಿ  ನಿಮ್ಮನ್ನು ಆಯ್ಕೆ ಮಾಡಲಾಗಿದೆ   ಸಾಮಾಜಿಕ ಕಳಕಳಿಯ  ಅಹಿಂದ ಒಕ್ಕೂಟದ ನಿಯಮಗಳಿಗೆ  ಹಾಗೂ ಸಂವಿಧಾನ ಬದ್ಧರಾಗಿ ತಮಗೆ ವಹಿಸಿರುವ  ಪದಾಧಿಕಾರದ  ಕರ್ತವ್ಯ ನಿರ್ವಹಿಸುವುದು  ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ  ಬೀರಲಿಂಗ ಎನ್ ಪೂಜಾರಿ  ತಿಳಿಸಿದ್ದಾರೆ