ಕನಸು ಕಂಡಷ್ಟೇ ಶ್ರಮ ಮುಖ್ಯ: ಎಚ್.ಎಸ್ ನಿರಂಜನರಾಧ್ಯ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೫: ಮಕ್ಕಳು ದೊಡ್ಡ ಕನಸು ಕಾಣಬೇಕು ಜೊತೆಯಲ್ಲಿ ಅಷ್ಟೇ ಶ್ರಮ ಕೂಡ ಮುಖ್ಯವಾಗಲಿದೆ ಎಂದು ಟ್ಯಾಕಲ್ ಅಕಾಡೆಮಿಯ ಅಧ್ಯಕ್ಷರಾದ ಡಾ. ಎಚ್.ಎಸ್ ನಿರಂಜನರಾಧ್ಯ ಹೇಳಿದರು.ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿಯ ಶ್ರೀ  ಕಾಗಿನೆಲೆ  ಕನಕ ಗುರು ಪೀಠದ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆಯಲ್ಲಿನ ಐ.ಎ.ಎಸ್,  ಕೆಎಎಸ್, ಯುಪಿಎಸ್ಸಿ 2024-25 ನೇ ಸಾಲಿನ ಮೂರನೇ ಬ್ಯಾಚ್. ಕೋಚಿಂಗ್ ತರಬೇತಿಗಳನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳು ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಜೊತೆಯಲ್ಲಿ ಅಷ್ಟೇ.  ಶ್ರಮವಹಿಸಿ  ಹಗಲಿರುಳು ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಆಗ ಮಾತ್ರ  ಸಮಾಜದಲ್ಲಿ ಅತ್ಯುತ್ತಮ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು.ರೇವಣಸಿದ್ದೇಶ್ವರ ಸಿಂಹಾಸನಧೀಶ್ವರ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಈ ಐ. ಎ  ಎಸ್ ಕೋಚಿಂಗ್ ಸೆಂಟರ್ ನಲ್ಲಿ ಉತ್ತಮವಾದ ಕಲಿಕೆಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಂತಹ ಪೂರಕವಾದ ವಾತಾವರಣ ಕಲ್ಪಿಸಲಾಗಿದೆ. ಅತ್ಯುತ್ತಮವಾದ ಮತ್ತು ನುರಿತ, ಬೋಧಕ ವರ್ಗ ನುರಿತ ಪ್ರೊಫೆಸರ್ ಗಳು ಇದ್ದಾರೆ ಎಂದರು.ಈ ಸಂದರ್ಭದಲ್ಲಿ ಟ್ಯಾಕಲ್ ಅಕಾಡೆಮಿಯಅಧ್ಯಕ್ಷ  ಡಾ.ಎಚ್.ಎಸ್.ನಿರಂಜನ್ ಆರಾಧ್ಯ, ಪ್ರೊ.ಎಸ್.ಕುಮಾರಸ್ವಾಮಿ, ಪ್ರೊ.ಎಂ ಬಿ ಸದಾಶಿವಯ್ಯ, ಡಾ. ಜ್ಯೋತಿ ಪಂಥ್, ಪ್ರೊ. ರವಿಶಂಕರ್, ಪೃಥ್ವಿ, ಎಸ್ ನಿಂಗಪ್ಪ, ಡಾ. ಶೃತಿ ಇನಾಮ್ದಾರ್ ಉಪಸ್ಥಿತರಿದ್ದರು