ಸರ್ಕಾರಿ ಶಾಲೆಗೆ ಕಲಿಕಾ ಪರಿಕರ ವಿತರಣೆ
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜೂ.೨೫; ಬೆಂಗಳೂರಿನ ಶ್ರೀಗಂಧ ಫೌಂಡೇಷನ್‌ ವತಿಯಿಂದ ಶಿವಮೊಗ್ಗ ತಾಲೂಕು ಚೋರಡಿಯ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕುಮದ್ವತಿ ಪ್ರೌಢಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್‌ ಬುಕ್‌ ಮತ್ತು ಕಲಿಕಾ ಪರಿಕರ ವಿತರಣೆ ಮಾಡಲಾಯಿತು. ಫೌಂಡೇಷನ್‌ನ ರವಿಪೂಜಾರಿ,ರಾಜೇಶ್‌ ಎಸ್‌.ವಿ.,ಗೀತಾಂಜಲಿ ದತ್ತಾತ್ರೇಯ, ವಿದ್ಯಾಸೂರ್ಯಕುಮಾರ್‌, ಜ್ಯೋತಿ ಸಂಜೀವ್‌, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ನಾಗೇಂದ್ರ ಉಪಸ್ಥಿತರಿದ್ದರು.