ಸತತ ಪರಿಶ್ರಮದಿಂದ ಸಾಧನೆಯ ಶಿಖರವೇರಬಹುದು: ಶಿಲ್ಪಾರಾಣಿ ಪಾಟೀಲ
ಕಲಬುರಗಿ:ಜೂ.25:ಮನುಷ್ಯರು ಸತತ ಪ್ರಯತ್ನದಿಂದ ಸಾಧನೆಯ ಶಿಖರವೇರಿ ಇತಿಹಾಸ ನಿರ್ಮಾಣ ಮಾಡಬಹುದು ಎಂದು ಎಸ್‍ಬಿಆರ್ ಶಿಕ್ಷಣ ಸಂಸ್ಥೆಯ ಸಹ ಶಿಕ್ಷಕರಾದ ಶಿಲ್ಪಾರಾಣಿ ಪಾಟೀಲ ಮಹಾಗಾಂವ ಹೇಳಿದರು.
ಕಲಬುರಗಿ ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 216ನೇ ವಾರದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ಆತ್ಮ ಶುದ್ಧ ದಿಂದ ಕಾಯಕ ಮಾಡಿದರೆ ಆತ್ಮ ತೃಪ್ತಿಯೊಂದಿಗೆ ಸಂತೃಪ್ತ ಸಮಾಜ ನಿರ್ಮಿಸಬಹುದು ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಕಲ್ಯಾಣ ಕಹಳೆ ಪತ್ರಿಕೆ ಸಂಪಾದಕರಾದ ಶರಣಗೌಡ ಪಾಟೀಲ ಪಾಳಾ ಆಗಮಿಸಿದರು. ಇದೇ ಸಂದರ್ಭದಲ್ಲಿ ಡ್ರಾಮಾ ಜೂನಿಯರ್ ಸೆಷನ್ 5 ರಲ್ಲಿ ಕಲಬುರಗಿಯಿಂದ ಆಯ್ಕೆಯಾದ ಕುಮಾರ ವಾಸು ನಾಗರಾಜ ಪಾಟೀಲ ಅವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಣಿಕ್ ಮಿರ್ಕಲ್, ಶರಣಬಸಪ್ಪ ಪಾಟೀಲ ವರನಾಳ, ಸಿದ್ದಣ್ಣ ಬಿರೆದಾರ ವಾಡಿ, ವಸಂತ ಜಾದವ, ಗುರುರಾಜ ಹಸರಗುಂಡಗಿ, ಶಾಂತು ಕಲಬುರಗಿ, ಮಾಣಿಕ ಗುತ್ತೇದಾರ, ಶಿವಕುಮಾರ ಸಾವಳಗಿ, ಪ್ರಕಾಶ ಬಿರಾದಾರ ವಾಡಿ ಸೇರಿದಂತೆ ಅನೇಕ ಜನ ಪಾಲ್ಗೊಂಡಿದ್ದರು.