ಸಾಹಿತಿಗಳಾಗಿ ಇಡೀ ಸಮಾಜಕ್ಕೆ ಮಾದರಿಯಾದವರು ಕಮಲಾಹಂಪನಾ
ಸಂಜೆವಾಣಿ ವಾರ್ತೆ
ಸಂಡೂರು:ಜು: 25: ದಾಂಪತ್ಯದಿಂದ ಕೂಡಿದವರು, ಸಾಹಿತ್ಯ ದಂಪತಿಗಳಾದರೂ, ಸಾಹಿತ್ಯ ಸ್ಪರ್ಧೆ ಇರುವುದು ಖಚಿತ, ಅದರೆ ಸತಿಪತಿಗಳ ಸಾಹಿತ್ಯ ಕಲ್ಪನೆ ಅದ್ಬುತವಾದುದು, ಸಮಾನ ಮನಸ್ಕಾರಾಗಿರುವಂತೆ ಅ ದೇವರೇ ಇವರನ್ನು ಸೃಷ್ಟಿಸಿದ್ದಾನೆ ಎನ್ನಬಹುದು ಎಂದು ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ತಿಳಿಸಿದರು.
ಅವರು ಇಂದು ಪಟ್ಟಣದ ಬಿಕೆಜಿ ಕಛೇರಿಯಲ್ಲಿ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಕಮಲಾ ಹಂಪನಾ ಅವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸತಿಪತಿಗಳು ಅಗಾಧವಾದ ಪ್ರೀತಿಯನ್ನು ಹೊಂದಿದ್ದರು, ಅವರು ರಚಿಸದ ಕಥಾಸಂಕಲನ, ಆಕಾಶವಾಣಿ ನಾಟಕಗಳು, ಮಕ್ಕಳ ಪುಸ್ತಕಗಳು, ಹೆಳವನಕಟ್ಟೆ ಗಿರಿಯಮ್ಮ, ಅಲ್ಲದೆ ಅನುವಾದಗಳನ್ನು ಮಡುವಲ್ಲಿ ಎತ್ತಿದ ಕೈ, ವಿಮರ್ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ, ಅವರಿಗೆ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬರುವ ಮೂಲಕ ಕನ್ನಡ ಸಾಹಿತ್ಯದ ದಿಗ್ಗಜರಾಗಿದ್ದರು, ಅವರ ಅಗಲಿಕ್ಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನುಡಿನಮನ ಸಲ್ಲಿಸಿದರು.
ಕಾಸಾಪ ಮಾಜಿ ಅಧ್ಯಕ್ಷರು, ನಿವೃತ್ತ ಉಪನ್ಯಾಸಕರಾದ ಬಿ.ಅರ್. ಮಸೂತಿಯವರು ಮಾತನಾಡಿ ನಮ್ಮ ನುಡಿಗಳೇ ನಮನ, ನಮನಗಳೀಗೆ ಅರ್ಹತೆ ಪಡೆದವರು ಕಮಲಹಂಪನಾ, ಜಾತಸ್ಯ ಮರಣಂ ಧೃವಂ ಎನ್ನುವ ನುಡಿಯಂತೆ ಹುಟ್ಟು- ಸಾವು ಖಚಿತ, ಸಾವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಹುಟ್ಟು ಸಾವಿನ ಮರ್ಮ ಯಾರಿಗೂ ಗೊತ್ತಿಲ್ಲ, ಹೃದಯಾಘಾತವಲ್ಲ, ಹೃದಯಸ್ತಂಭನವಾಗಿ ಲೀನರಾದವರು ಕಮಲಾಹಂಪನಾ ಅವರು, ಸತಿಪತಿಗಳಿಬ್ಬರೂ ಮೈಸೂಇನ ಕಾಲೇಜಿನಲ್ಲಿ ಅಭ್ಯಾಸಿಸಿದರು. ಮನುಷ್ಯರಲ್ಲಿ ಅನೇಕ ರೀತಿಯ ಅಹಂಕಾರಗಳಿರುತ್ತವೆ. ಕಮಲರವರು ಅಹಂಕಾರವಿಲ್ಲದಿರುವುದನ್ನು ಕಂಡು ಮನದಲ್ಲಿ ಉತ್ತಮ ಅಲೋಚನೆ ಮಾಡಿದವರು ಹಂಪನಾ ನಾಗರಾಜ ಪ್ರೀತಿಗೆ ಜಾತಿ ಮುಖ್ಯವಲ್ಲ ಎಂದು ಬಿಂಬಿಸಿದವರು, ಏಳು ಜನ ಬೇರೆ ಬೇರೆ ಜಾತಿಯ ಸ್ನೇಹಿತರನ್ನು ಸೇರಿಸಿಕೊಂಡು ಕಮಲಾ ಅವರನ್ನು ರಿಜಿಸ್ಟರ್ ಮದುವೆಯಾಗುವ ಮೂಲಕ ಜಾತಿಯ ಸೋಂಕು ಅವರ ಪ್ರೀತಿಗೆ ತಾಗದಂತೆ ನೋಡಿದವರು. ಕಮಲಾ ಅವರು ವಾಲ್ಮೀಕಿ ಜನಾಂಗದವರು, ಅದರೂ ಬಹಳ ಸೂಕ್ಷ್ಮ ಮತಿಯುಳ್ಳವರು, ಜೈನ ಧರ್ಮವನ್ನು ಅರಿತು ಅಪಾರ ಜ್ಞಾನ ಸಂಪಾದಿಸಿದ್ದರು, ಹಂಪಿ ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸ ನಿಡಿದ್ದರು, ಸಾಹಿತಿ, ಉಪನ್ಯಾಸಕಿ, ಗೃಹಿಣಿಯಾಗಿ ವೃತ್ತಿಯನ್ನು ಸಂಭಾಳಿಸಿಕೊಂಡು ಹೋದವರು 60ಕ್ಕೂ ಹೆಚ್ಚು ಕೃತಿಗಳನ್ನು, ನಾಟಕಗಳನ್ನು ಬರೆದರು, ಸತಿಪತಿಗಳಿಬ್ಬರಿಗೂ ನಾಡೋಜ ಪ್ರಶಸ್ತಿ ಲಭಿಸಿದೆ, ಕಮಲರವರು ಸ್ನೇಹಜೀವಿಗಳಾಗಿ ಅಮರಾದರು, ಮಹಿಳಾ ಸಾಹಿತ್ಯ ಪ್ರಾರಂಭವಾದುದು ಶರಣರ ಕಾಲದಿಂದ, ಮಹಿಳಾ ಸಾಹಿತ್ಯ 1950ರ ನಂತರ ಬೆಳವಣಿಗೆ ಆಯಿತು ಅಲ್ಲಿಯವರೆಗೆ ಮಹಿಳಾ ಸಾಹಿತ್ಯಕ್ಕೆ ಹಿನ್ನಡೆಯಾಗಿದೆ.
ರಾಜೀವ್ ತಾರಾನಾಥರವರು ಸರೋದ ವಾದನದ ಸಂಗೀತಕಾರರು ಅವರೂ ಸಹ ಮಾಹಾನ್ ಸಂಗೀತಕಾರರ, ಅಂತಹ ದೊಡ್ಡ ಸಂಗೀತಕಾರರೂ ಸಹ ನಮ್ಮನ್ನು ಅಗಲಿದ್ದಾರೆ, ಅವರ ಸ್ಮರಣೆಯೂ ಸಹ ಬಹು ಮುಖ್ಯ, ಕಾರಣ ಸಂಗೀತಕ್ಕಾಗಿಯೇ ತಮ್ಮ ಬದುಕನ್ನು ಮುಡುಪಾಗಿಟ್ಟವರು ಎಂದರು.
ಮಾಜಿ ಅಧ್ಯಕ್ಷರಾದ ಸಿ.ಎಂ. ಸಿಗ್ಗಾವಿಯವರು ಮಾತನಾಡಿ ದಾನಚಿಂತಾಮಣಿ, ಅತ್ತಿಮೊಬ್ಬೆ ಪ್ರಶಸ್ತಿ ಪಡೆದ ಸಂಶೋಧಕರಾದ ಕಮಲ ಹಂಪನಾರವರ ನಿಧನ ನೋವುಂಟುಮಾಡಿದೆ, ದಾಂಪತ್ಯದಲ್ಲಿ ಸ್ಪರ್ಧೆಯೊಂದೇ ಅಲ್ಲ, ಸಾಹಿತ್ಯದಲ್ಲಿ ಸ್ಪರ್ಧೆಯಿಂದ ಸಮಬಲ ಹೊಂದಿದ್ದರು. ಈಗಿನ ಮಹಿಳಯರಿಗಿಂತ ವಿಭಿನ್ನ ವಾದವರು ಕಮಲರವರು, ಅವರಿಗೆ ಬಾಯಿ ಜಾಸ್ತಿ ಎಂದು ಹಂಪಾನಾಗರವರು ಅವರಿಗೆ ಕಮಲಬಾಯಿ ಎಂದು ಕರೆದರು, ಸಾಹಿತ್ಯ ಎನ್ನುವುದು ಪರಿಷತ್ತಿಗೆ ಮಾತ್ರ ಸಂಬಂಧವಲ್ಲ ಪ್ರತಿಯೋರ್ವರೂ ಭಾಗವಹಿಸಿ ನುಡಿನಮನ ಸಲ್ಲಿಸಬೇಕಾಗಿದೆ ಎಂದರು.
ಪತ್ರಕರ್ತರಾದ ಬಸವರಾಜ ಬಣಕಾರ ಮಾತನಾಡಿ ಇಂದು ನಾವು ಜಾತಿಯ ಜಂಜಡದಲ್ಲಿ ಸಿಲುಕಿದ್ದೇವೆ, ಅದರೆ ಅದನ್ನು ಮೀರಿ ಜಾತಿ, ಮತ, ಪಂಥವನ್ನು ದೂರತಳ್ಳಿ ಅಂತರ್ ಜಾತಿ ವಿವಾಹವನ್ನು ಮಡಿಕೊಂಡು ಕೆಸರಿನಲ್ಲಿ ಕಮಲವಿದ್ದಂತೆ ಇದ್ದವರು ಕಮಲಹಂಪನಾ ಅವರು, ಅವರು ಪತಿ ಧರ್ಮವಾದ ಜೈನ ಧರ್ಮದ ಸಾಹಿತ್ಯವನ್ನು ಉತ್ತಮ ರೀತಿಯಲ್ಲಿ ಸಂಪಾದಿಸಿ, ಸಂಶೋಧನೆ ಮಾಡಿ ಅದ್ಭುತ ಸಾಹಿತ್ಯ ರಚಿಸಿದವರು, ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ 1992 ಹಾಗೂ 94ರಲ್ಲಿ ವಿಶೇಷ ಹಳಗನ್ನಡ ಉಪನ್ಯಾಸ ನೀಡಲು ಅಗಮಿಸಿದ್ದರು, ಅವರು ವಾಲ್ಮೀಕಿಗಳಾಗಿದ್ದರೂ ಸಹ ಜೈನಧರ್ಮದ ಶ್ರೇಷ್ಠ ಸಾಹಿತ್ಯ ರಚಿಸಿದವರು, ಅದ್ದರಿಂದ ಅವರನ್ನು ಒಂದು ವರ್ಗ, ಜಾತಿ, ಧರ್ಮಕ್ಕೆ ಕಟ್ಟಿಹಾಕದೆ ಪ್ರತಿಯೊಬ್ಬರೂ ಅವರ ಸಾಹಿತ್ಯವನ್ನು ತಿಳಿಯಬೇಕು, ಅವರಂತೆ ಜಾತ್ಯಾತೀತವಾಗಿ ಇರಬೇಕೆಂದರು.
ನಿವೃತ್ತ ಮುಖ್ಯಗುರುಗಳಾದ ಎ.ಚಂದ್ರಶೇಖರಪ್ಪ ಮಾತನಾಡಿ ಮಹಾನ್ ಸಾಧನೆಯಿಂದ ಸಾಹಿತ್ಯ ಸೇವೆಯನ್ನು ಸಲ್ಲಿಸಿದವರಲ್ಲಿ ಕಮಲಾಹಂಪನಾಪ್ರಮುಖರು, ಜಾತಿ ಬೇರೆಯಲ್ಲಿ, ಧರ್ಮವೂ ಬೇರೆಯಾಗಿದ್ದು ಅಂತರ್ ಧರ್ಮದವರು ಮದುವೆಯಾಗಿ ಆದರ್ಶ ದಂಪತಿಗಳಾಗಿದ್ದರು, ಕಮಲಪ್ರಿಯಾ ಎನ್ನುವ ಅಂಕಿತದಿಂದ ವಚನಸಾಹಿತ್ಯ ರಚಿಸಿದರು ಎಂದರು.
ಸಮಾರಂಭದಲ್ಲಿ ಕದಳಿವೇದಿಕೆ ಜಿಲ್ಲಾಧ್ಯಕ್ಷೆ ನೀಲಾಂಬಿಕೆ, ಕಸಾಪ ಸದಸ್ಯರಾದ ಕಲ್ಪನಾ ವಂದಿಸಿದರು, ಹೆಚ್.ಎನ್.ಬೋಸ್ಲೆ ಸ್ವಾಗತಿಸಿದರು, ಜಿ.ವೀರೇಶ್ ನಿರೂಪಿಸಿದರು, ಎಂ.ಟಿ.ರಾಥೋಡ್, ಎ.ಎಂ. ಶಿವಮೂರ್ತಿಸ್ವಾಮಿ, ಸಿ.ಎಂ. ಸಿಗ್ಗಾವಿ, ಹೆಚ್.ಎನ್. ಬೋಸ್ಲೆ, ಬಸೀಷರ್ ಅಹ್ಮದ್, ಎಸ್.ಡಿ.ಪ್ರೇಮಲೀಲಾ, ಎಸ್.ಡಿ. ಬಾದಾಮಿ, ಸುರವ್ವನಹಳ್ಳಿ ನಾಗರಾಜ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.