ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಆಗ್ರಹ
ಕೋಲಾರ,ಜೂ.೨೫- ದಿವಂಗತ ಕೆ.ಸಿ.ರೆಡ್ಡಿ ರವರ ಜನ್ಮಸ್ಥಳವಾದ ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿಯಲ್ಲಿ ಸರ್ಕಾರಿ ಪಿಯು ಕಾಲೇಜು ೨೦೨೪-೭೫ ನೇ ಸಾಲಿನಲ್ಲಿ ಪ್ರಾರಂಭಿಸುವಂತೆ ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳು ಕೋಲಾರ ಸರ್ಕಾರಿ ಪಿಯು ಕಾಲೇಜು ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಪ್ರಥಮ ಮುಖ್ಯಮಂತ್ರಿ ಸ್ವತಂತ್ರ ಹೋರಾಟಗಾರರಾದ ದಿವಂಗತ ಕೆ.ಸಿ.ರೆಡ್ಡಿ ರವರ ಜನ್ಮಸ್ಥಳವಾದ ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿಯಾಗಿದ್ದು, ಇದು ಪ್ರಮುಖ ಹೋಬಳಿ ಕೇಂದ್ರವಾಗಿರುತ್ತದೆ. ಇಲ್ಲಿನ ಸುತ್ತಮುತ್ತಲು ಎಂಟು ಪ್ರೌಢಶಾಲೆಗಳಿದ್ದು ಸುಮಾರು ೧೦೦ ಗ್ರಾಮಗಳು ಅವಲಂಭಿಸಿದೆ. ಈ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜು ಇಲ್ಲದೆ ೧೦ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ದೂರದ ಪಟ್ಟಣಕ್ಕೆ ಹೋಗಲು ಆರ್ಥಿಕವಾಗಿ ದುರ್ಬಲರಾಗಿದ್ದು ಹಾಗೂ ಸಾರಿಗೆ ವ್ಯವಸ್ಥೆಯಿಲ್ಲದೆ ಸುಮಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಮಟಕುಗೊಳಿಸುತ್ತಾರೆ.
ಇದು ಗಡಿನಾಡಿನ ಭಾಗವಾಗಿದ್ದು ಮುಂದಿನ ವ್ಯಾಸಂಗಕ್ಕೆ ಅಡ್ಡಿಯಾಗಿರುತ್ತದೆ. ಸುತ್ತಮುತ್ತಲಿನ ಗ್ರಾಮಸ್ಥರು ೬ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಸಹಿ ಸಂಗ್ರಹಿಸಿ ಸರ್ಕಾರಕ್ಕೂ, ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ.
ಸರ್ಕಾರಿ ಪಿಯು ಉಪನಿರ್ದೇಶಕರು ಕೋಲಾರ ರವರು ಕ್ಯಾಸಂಬಳ್ಳಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸರ್ಕಾರಕ್ಕೆ ಎರಡು ಸಲ ವರದಿ ಸಲ್ಲಿಸಲಾಗಿದೆ. ಮೂರನೇ ಸಲ ಅನುಮೋದನೆಗೆ ೨೦೨೩-೨೪ ರಲ್ಲಿ ಕಾಲೇಜು ಪ್ರಾರಂಭಿಸಲು ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಿರುತ್ತಾರೆ. ಹಾಗೂ ಪಿಯು ನಿರ್ದೇಶಕರು ಬೆಂಗಳೂರು ರವರು ಸಹಾ ಎರಡು ಸಲ ಪಿಯು ಕಾಲೇಜು ಪ್ರಾರಂಭಿಸಲು ಸರ್ಕಾರಕ್ಕೆ ವರದಿಯನ್ನು ಕಳುಹಿಸಿರುತ್ತಾರೆ.
ಈ ಬಗ್ಗೆ, ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲದಿರುವುದರಿಂದ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ವೇದಿಕೆಯ ರಾಜ್ಯ ಸಮಿತಿ ದಲಿತ ಸಂಘ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕ್ಯಾಸಂಬಳ್ಳಿ ಯಿಂದ ಕೆಜಿಎಫ್ ತಾಲೂಕು ಕಚೇರಿಯವರಿಗೆ ಕಾಲ್ನಡಿಗೆ ಮಾಡಿ ಸರ್ಕಾರಕ್ಕೆ ಮನವಿ ತಲುಪಿಸಲು ತಹಸೀಲ್ದಾರ್ ರವರಿಗೆ ಮನವಿಯನ್ನು ಸಲ್ಲಿಸಲಾಗಿದ್ದು ಮತ್ತು ಕೆಜಿಎಫ್ ನ ಶಾಸಕರಿಗೆ ಜನತಾ ದರ್ಶನದಲ್ಲಿ ಮನವಿಯನ್ನು ಸಲ್ಲಿಸಿದ್ದು ಹಾಗೂ ಮಾನ ಮುಖ್ಯಮಂತ್ರಿಯವರಿಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಎರಡು ಸಲ ಮನವಿಯನ್ನು ಸಲ್ಲಿಸಿರುತ್ತೇವೆ.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ನಾರಾಯಣಸ್ವಾಮಿ, ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ ಜೆ.ಸೋಮಸುಂದರರೆಡ್ಡಿ, ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆಯ ಬಿ.ಜಿ.ಎಸ್.ಸತೀಶ್, ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕೆ.ಜಿ.ಎಫ್ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಮುಳಬಾಗಿಲು ತಾಲೂಕು ಅಧ್ಯಕ್ಷೆ ಮಹಾಲಕ್ಷ್ಮಿ, ಭುವನಹಳ್ಳಿ ಸಂದೇಶ್, ಕ್ಯಾಸಂಬಳ್ಳಿ ಆನಂದಬಾಬು ಇದ್ದರು.