ಯೋಗಮಾಡುವುದರ ಜೊತೆಗೆ ನಿರೋಗಿಗಳಾಗಿ
ಸಂಜೆವಾಣಿ ವಾರ್ತೆ
ಸಂಡೂರು: ಜು: 25: ಯೋಗ ಮಾಡುವುದರಿಂದ ಸದೃಢಕಾಯರಾಗಲು ಸಾಧ್ಯ, ಯೋಗ ಧ್ಯಾನ, ಭಜನೆ ಆಧ್ಯಾತ್ಮ ಚಿಂತನೆ ಇವುಗಳನ್ನು ಮೈಗೂಡಿಸಿಕೊಂಡರೆ ಆರೋಗ್ಯ ಸದೃಢಕಾಯ, ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಲು ಸಾಧ್ಯ, ಯೋಗ ಮಡುವುದರಿಂದ ರಓಗ ರುಜಿನ ತಡೆಯಬಹುದು, ಯೋಗ ಮಾಡಿ ನಿರೋಗಿಗಳಾಗಿ, ಯೋಗ ಜು 21 ರಂದು ಅಷ್ಠೆ ಮೀಸಲಾಗಿರದೆ ನಿತ್ಯವೂ ಒಂದು ತಾಸು ಬೆಳಿಗ್ಗೆ , ಸಂಜೆ 1 ತಾಸು ಯೋಗಾಭ್ಯಾಸ ಮಾಢುವುದು ಉತ್ತಮ. ನೀವು ಆರೋಗ್ಯವಂತರಾಗಬೇಕಾದರೆ ನೀವು ತಿನ್ನುವ ಆಹಾಋದಲ್ಲಿ ಇತಿ ಮಿತಿ ಇಟ್ಟುಕೊಳ್ಳುವುದು ಉತ್ತಮ ಭಾರತದೇಶದ ಪ್ರಧಾನಮಂತ್ರಿಗಳು 2014ರಲ್ಲಿ ಯುನೆಸ್ಕೋದಲ್ಲಿ ಭಾಷಣ ಮಾಢಿ ಯೋಗದಿಂದಾಗು ಲಾಭ ಮತ್ತು ಪರಿಣಾಮಗಳನ್ನು ವಿವಿರಿಸಿ ಜು 21 ರಂದು ವಿಶ್ವಯೋಗದಿನಾಚರಣೆಯ ದಿನವನ್ನಾಗಿ ಘೋಷಿಸಿದರು. ಪ್ರತಿಯೋರ್ವರು ಜು: 21 ರಂದು ಯೋಗ ದಿನಾಚರಣೆ ಆಚರಿಸುತ್ತದೆ ಜಗತ್ತು ಎಂದು ಬೊಮ್ಮಘಟ್ಟದ ಶಿಕ್ಷಕ ನಾಗರಾಜ ತಿಳಿಸಿದರು.
ಅವರು ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಬೊಮ್ಮಘಟ್ಟ ಸರ್ಕಾರಿ ಪ್ರೌಡಶಾಲೆಯಲ್ಲಿ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತದೇಶದಲ್ಲಿ ಯೋಗಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದ್ದು ಪಾಶ್ಚಾತ್ಯರು ಸಹ ಯೋಗಕ್ಕೆ ಮಹತ್ವ ನೀಡಿರುವುದು ಸಂತಸದ ಸಂಗತಿ. ದೈಹಿಕ ಶಿಕ್ಷಕ ಪರಸಪ್ಪನವರು ವಿದ್ಯರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಮಾಢುವಂತೆ ಮಾಡಿದರು. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲು ಸಾಧ್ಯ, ಈ ಸಂದರ್ಭದಲ್ಲಿ ವಿಜಯಕುಮಾರ, ನರಸಿಂಹ, ಮಹೇಂದ್ರ ಸಮಜಯ ಸಿದ್ದೇಶ, ಹುಲಿರಾಜ ರೇಖಾ ಇತರರು ಉಪಸ್ಥಿತರಿದ್ದರು.