ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಿಂದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ತಿಳುವಳಿಕೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.25: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಪರಿಸರ ಸಂರಕ್ಷಣೆ ಮೂಢನಂಬಿಕೆಗಳ ವಿರುದ್ಧ ಹೋರಾಟ ವೈಜ್ಞಾನಿಕ ತಿಳುವಳಿಕೆ ಪ್ರಮುಖವಾಗಿ ಮಕ್ಕಳಿಗೆ ಅರಿವು ಮೂಡಿಸುವುದಾಗಿದೆ. ಎಂದು ಬಳ್ಳಾರಿ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಆರ್ ಎಚ್ ಎಂ ಚನ್ನಬಸವಸ್ವಾಮಿ ಅಭಿಪ್ರಾಯಪಟ್ಟರು.
ಬಳ್ಳಾರಿಯ ರೇಡಿಯೋ ಪಾರ್ಕ್ ನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆಯೆಡೆಗೆ ವಿಜ್ಞಾನ ನಡಿಗೆ ಪರಿಸರ ದಿನಾಚರಣೆ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಕೃತಿಯ ಉಳಿವಿನ ಬಗ್ಗೆ ತಿಳುವಳಿಕೆ ಅಗತ್ಯ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರ-ಗಿಡಗಳನ್ನು ಕಡಿದು ಕೆರೆ ಹಳ್ಳ ಗಳನ್ನು ಬತ್ತಿಸಿ ಸಮಾಧಿಗಳೆಂಬೋ ದೊಡ್ಡ ದೊಡ್ಡ ಬಂಗಲೆಗಳನ್ನು ನಿರ್ಮಿಸಿಕೊಂಡು ತನ್ನ ಜೀವನಶೈಲಿ ರೂಪಿಸಿಕೊಂಡು ಅಧಃಪತನಕ್ಕೆ ಈಡಾಗುತ್ತಿರುವುದು ದುರ್ದೈವ ಎಂದು ವಿಷಾದ ವ್ಯಕ್ತಪಡಿಸಿದರು.
ಪರಿಷತ್ತಿನ ಸಹ ಕಾರ್ಯದರ್ಶಿ ಯಾದ ಯು ರಮೇಶ್ ಮಾತನಾಡಿ, ಯಾರೋ ಬೆಳೆಸಿದ ಗಿಡ ಮರಗಳ ನೆರಳಲ್ಲಿ ನೆಮ್ಮದಿ  ಕಾಣುವಂತೆ ಮುಂದಿನ ಪೀಳಿಗೆಗೂ ನೆಮ್ಮದಿ ಕಾಣಲು ಗಿಡಮರಗಳನ್ನು ಇಂದೇಬೆಳೆಸಿರಿ ಅವುಗಳ ಸಂರಕ್ಷಣೆ ನಮ್ಮ ಹೊಣೆಯಾಗಬೇಕು ಅತಿವೃಷ್ಟಿ ಅನಾವೃಷ್ಟಿ ಯಿಂದ ಜನ ತತ್ತರಿಸುತ್ತಿದ್ದಾರೆ ಪ್ರಕೃತಿಯ ಅಸಮತೋಲನ ಬೆಟ್ಟ ಗುಡ್ಡಗಳ ನಾಶ ಗಣಿಗಾರಿಕೆ ಸ್ಥಗಿತಕೊಳ್ಳಬೇಕಿದೆ. ಎಂದರು
ಶಿಕ್ಷಕ ಲೋಕರಾಜ್ ಮಾತನಾಡಿ, ಮಕ್ಕಳಲ್ಲಿ ಪ್ರಕೃತಿ ಪರಿಸರ ಸಂರಕ್ಷಣೆ ಕುರಿತಾದ ಜಾಗೃತಿ ಮೂಡನಂಬಿಕೆಗಳಲ್ಲಿನ ಮನುಷ್ಯನ ಜಾಡ್ಯತೆ ಬದಲಾಗಬೇಕಿದೆ. ಮಂತ್ರ ತಂತ್ರಗಳಿಂದ ಮೋಸ ಮಾಡುವ ಮಾಯಾವಿಗಳಿಗೆ ಬುದ್ಧಿ ಕಲಿಸುವ ಪವಾಡ ಭಂಜಕ ಹುಲಿಕಲ್ ನಟರಾಜ್ ಹುಟ್ಟು ಹಾಕಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ರಾಜ್ಯಾದ್ಯಂತ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡಿ ವೈಜ್ಞಾನಿಕ ತಿಳುವಳಿಕೆ ನೀಡುತ್ತಿರುವುದು ಪ್ರಸಂಶನ ಕಾರ್ಯವಾಗಿದೆ ಎಂದರು.
ಶಿಕ್ಷಕ ಏಕಾಂತ ರೆಡ್ಡಿ ಮಾತನಾಡಿ, ಅಮೃತ ಅತಿ ಯಾದಷ್ಟು ವಿಷವಾಗುತ್ತದೆ ಹಾರ್ಮೋನುಗಳ ಹೆಚ್ಚಳದಿಂದ ದೇಹದಲ್ಲಿ ಅನೇಕ ಬದಲಾವಣೆಯಾದಂತೆ ಪ್ರಕೃತಿಯಲ್ಲಿಯೂ ವಾಯು  ಮಾಲಿನ್ಯದಿಂದಲೂ ಅನೇಕ ರೀತಿಯ ರಾಸಾಯನಿಕ ಕ್ರಿಯೆಯಿಂದ ಪ್ರಾಣಿ ಸಂಕುಲಗಳಿಗೂ ಮನುಜರಿಗೂ ತೊಂದರೆಯಾಗುತ್ತಿದೆ ಎಂದರು
ಹಿಂದಿ ಶಿಕ್ಷಕಿ ಇವರು ಅಡುಗೆಮನೆ ವೈದ್ಯ ಕುರಿತಾಗಿ  ಶಿಕ್ಷಕ ಏರಿಸ್ವಾಮಿ ಕಾರ್ಯಕ್ರಮದ ಯೋಜನೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿಯರಾದ ತುಳಸಿ ಸವಿತಾ ತೇಜಸ್ವಿನಿ ಪರಿಸರ ಕುರಿತಾಗಿ ಮಾತನಾಡಿದರು ಇವರಿಗೆ ವಿಜ್ಞಾನ ಸಿರಿ ಸಂಚಿಕೆಯನ್ನು ಬಹುಮಾನವಾಗಿ ನೀಡಲಾಯಿತು ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ವೀರಭದ್ರಯ್ಯ ಪ್ರಾರ್ಥಿಸಿದರು ಸ್ವಾಗತ ಸಿದ್ದರಾಮಯ್ಯ ಅಪ್ಪ ಕನ್ನಡ ಭಾಷೆ ಶಿಕ್ಷಕರು ಮತ್ತು ವಂದನಾರ್ಪಣೆಯನ್ನು ತೆಲುಗು ವಿಜ್ಞಾನ ಶಿಕ್ಷಕಿ ರಾಗಿಣಿ ವಂದಿಸಿದರು