ರಸ್ತೆಗಳ ಅಗಲೀಕರಣಕ್ಕೆ ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.25: ಬಳ್ಳಾರಿ ನಗರದ ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಬ್ರಾಹ್ಮಣ ಬೀದಿ ಮತ್ತು ಗೋಲ್ಡ್‍ಸ್ಮಿತ್ ಬೀದಿ ಈ ಬೀದಿಗಳಿಗೆ ಸಂಬಂಧಪಟ್ಟಂತೆ ಅಡ್ಡ ರಸ್ತೆಗಳು ಸುಮಾರು 40 ಅಡಿ ಅಗಲೀಕರಣ ಮಾಡುವಂತೆ ಮತ್ತು ಬೆಂಗಳೂರು ರಸ್ತೆಯ ನಟರಾಜ ಚಿತ್ರಮಂದಿರ ರಸ್ತೆಯಿಂದ ಎಪಿಎಂಸಿ ರಸ್ತೆಯವರೆಗಿನ ಅಂಗಡಿ ಮಾಲೀಕರು ಮತ್ತು ಇನ್ನಿತರರು ಒತ್ತುವರಿ ಮಾಡಿಕೊಂಡಿರುವ ಪಾದಾಚಾರಿ ರಸ್ತೆಯನ್ನು ತೆರವುಗೊಳಿಸುವಂತೆ ಯುವಸೇನಾ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ಪಾಲಿಕೆಯ ಮಹಾಪೌರರಿಗೆ ಮನವಿ ಮಾಡಿದೆ.
ಈ ರಸ್ತೆಗಳಲ್ಲಿ ಬ್ರಿಟಿಷ್ ಆಡಳಿತದಲ್ಲಿ ಸುಮಾರು 30 ಅಡಿ ಅಗಲ ಇದ್ದವು, ಈ ರಸ್ತೆಯ ಮ್ಯಾಪ್‍ಗಳು ಬೇಕಾದರೆ ತಹಶೀಲ್ದಾರರ ಕಛೇರಿಯಲ್ಲಿ ಸಿಗುತ್ತವೆ. ಈ ರಸ್ತೆಗಳಲ್ಲಿನ ನಿವಾಸಸ್ಥರು ಹಾಗೂ ಎಲ್ಲಾ ಅಂಗಡಿ ಮಾಲೀಕರು ಮತ್ತು ಮನೆ ಮಾಲೀಕರು ಒಬ್ಬರನ್ನೋಡಿ ಒಬ್ಬರು ರಸ್ತೆ ಒತ್ತುವರಿ ಮಾಡಿಕೊಂಡು ಚಿಕ್ಕದಾದ ರಸ್ತೆಗಳನ್ನಾಗಿ ಪರಿವರ್ತಿಸಿದ್ದಾರೆ.
ಯಾರ ಮೇಲೆ ದಯಾದಾಕ್ಷಿಣ್ಯ ಇಲ್ಲದೆ ಕಾನೂನು ಪರವಾಗಿ ನಗರವನ್ನು ರಸ್ತೆ ಅಗಲೀಕರಣ ಮಾಡಿ, ಸುಂದರವಾದ ರಸ್ತೆ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರಿಗೆ ತೊಂದರೆ ಇಲ್ಲದಂತೆ ಸುಗಮ ಸಂಚಾರಕ್ಕೆ ಅನುಕೂಲವಾದ ರಸ್ತೆಗಳನ್ನು ನಿರ್ಮಿಸಿ ಸುಂದರ ನಗರ ಮಾಡುವಂತೆ ಮನವಿ ಮಾಡಿದ್ದಾರೆ.
ಮನವಿಪತ್ರ ಸಲ್ಲಿಸಿದ ಸಂದರ್ಭದಲ್ಲಿ  ಯುವಸೇನ ಸೊಶಿಯಲ್ ಯ್ಯಾಕ್ಷನ್ ಕ್ಲಬ್ ನ ಅಧ್ಯಕ್ಷರ ಮೇಕಲ ಈಶ್ವರರೆಡ್ಡಿ, ಕಾರ್ಯಕರ್ತರಾದ ಎಸ್.ಕೃಷ್ಣ, ಜಿ.ಎಂ. ಭಾಷ, ಪಿ.ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ                ಶ್ರೀನಿವಾಸರೆಡ್ಡಿ.ಎಂ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಕೆ.ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಇದ್ದರು.