ಬೀದಿಬದಿಯ ಅಂಗಡಿಗಳ ತೆರವು ಕಾರ್ಯಾಚರಣೆ ಆರಂಭ
ಬಸವನಬಾಗೇವಾಡಿ: ಸೆ.26:ಪಟ್ಟಣದ ವಿಜಯಪುರ ರಸ್ತೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಪಾದಚಾರಿ ರಸ್ತೆಯಲ್ಲಿ ಇರುವ ಬೀದಿಬದಿಯ ಅಂಗಡಿಗಳ ತೆರವು ಕಾರ್ಯಾಚರಣೆ ಪುರಸಭೆಯಿಂದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ಗುರುಶಾಂತ ದಾಶ್ಯಾಳ,ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಸಮ್ಮುಖದಲ್ಲಿ ಆರಂಭವಾಯಿತು.
ಪಟ್ಟಣದ ಅಯ್ಯಪ್ಪ ದೇವಸ್ಥಾನದಿಂದ ಆರಂಭಗೊಂಡ ಕಾರ್ಯಾಚರಣೆ ಬಸವ ಭವನದವರೆಗೂ ನಡೆಯಿತು. ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಬೀದಿ ಬದಿಯ ಅಂಗಡಿಕಾರರು ತಮ್ಮ ಸಾಮಾನುಗಳನ್ನು ಎತ್ತಿಇಟ್ಟುಕೊಳ್ಳುತ್ತಿರುವದು ಕಂಡುಬಂದಿತ್ತು. ಪುರಸಭೆ ಪೌರಕಾರ್ಮಿಕರು ಅಂಗಡಿಗಳನ್ನು ಎತ್ತಿಇಡುವದು ಕಂಡು ಬಂದಿತು. ಜೆಸಿಬಿಯಿಂದ ಅಂಗಡಿಗಳನ್ನು ತೆರವು ಮಾಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಮಾತನಾಡಿ, ಪಟ್ಟಣದ ಎಲ್ಲ ರಸ್ತೆಯಲ್ಲಿ ಪಾದಚಾರಿ ರಸ್ತೆಯಲ್ಲಿ ಇರುವ ಬೀದಿ ಬದಿಯ ಅಂಗಡಿಗಳನ್ನು ಪುರಸಭೆಯಿಂದ ತೆರವು ಗೊಳಿಸಲಾಗುವದು. ಮೊದಲ ಹಂತವಾಗಿ ಇಂದು ವಿಜಯಪುರ ರಸ್ತೆಯಲ್ಲಿ ಅಯ್ಯಪ್ಪ ದೇವಸ್ಥಾನದಿಂದ ಬಸವ ಭವನದವರೆಗೂ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ರಸ್ತೆಯಲ್ಲಿ ಕಾರ್ಯಾಚರಣೆ ಮಾಡಲಾಗುವದು. ಈಗಾಗಲೇ ಬೀದಿ ಬದಿಯ ಅಂಗಡಿಗಳ ಮಾಲೀಕರಿಗೆ ತಮ್ಮ ಅಂಗಡಿಗಳನ್ನು ತೆರವು ಗೊಳಿಸಬೇಕೆಂದು ತಿಳಿಸಲಾಗಿದೆ. ತೆರವು ಗೊಳಿಸದೇ ಇರುವ ಅಂಗಡಿಗಳನ್ನು ತೆರವು ಗೊಳಿಸಬೇಕಾಗುತ್ತದೆ.ಬೀದಿ ಬದಿಯಲ್ಲಿ ಕಾನೂನು ಪ್ರಕಾರ ಕಾಯಂ ಅಂಗಡಿ ಹಾಕುವಂತಿಲ್ಲ.ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ. ಪಾದಚಾರಿಗಳಿಗೆ, ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಕಾರ್ಯಾಚರಣೆ ಸಂದರ್ಭದಲ್ಲಿ ಪಿಎಸ್‍ಐಗಳಾದ ವಿನೋದ ಪೂಜಾರಿ, ಆರ್.ಎಂ.ಕಂಚಗಾರ, ದುಂಡಸಿ, ಎಎ??? ತಳವಾರ, ಪೆÇಲೀಸ್ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಇದ್ದರು. ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.