ಯೋಗದಿಂದ ರೋಗಮುಕ್ತ ಸಮಾಜ: ಯೋಗೆಂದ್ರ ಯದಲಾಪೂರೆ
ಬೀದರ:ಜೂ.25: ಎಲ್ಲರೂ ದಿನಾಲು ಯೋಗಭ್ಯಾಸ ಮಾಡುವದರಿಂದ ರೋಗ ಮುಕ್ತ ಸಮಾಜ ಕಟ್ಟಲು ಸಾಧ್ಯವೆಂದು ಬೀದರ ಜಿಲ್ಲಾ ಪತಾಂಜಲಿ ಸಮಿತಿಯ ಅಧ್ಯಕ್ಷರಾದ ಯೋಗೆಂದ್ರ ಯದಲಾಪೂರೆ ನುಡಿದರು. ಅವರು ಇಂದು ನಗರದ ಸಿದ್ಧಾರ್ಥ ಪದವಿ ಕಾಲೇಜಿನಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮುಂದುವರಿದು ಮಾತನಾಡುತ್ತಾ ಭಾರತ ವಿಶ್ವಕ್ಕೆ ಯೋಗ ಕುರಿತಾದ ಶ್ರೇಷ್ಠ ಕೊಡುಗೆ ಕೊಟ್ಟಿದೆ. ನಮ್ಮ ಋಷಿ ಮುನಿಗಳು ಹಾಕಿಕೊಟ್ಟ ಸಂಸ್ಕøತಿ ಪರಂಪರೆ ಮತ್ತು ಯೋಗದಿಂದ ರೊಗ ಮುಕ್ತ ಸಮಾಜ ಕಟ್ಟಲಿಕ್ಕೆ ಸಹಕಾರಿಯಾಗಲಿದೆ ಎಂದು ನುಡಿದರು.
ಈ ಕಾರ್ಯಕ್ರಮದ ವಿಶೇಷ ಉಪನ್ಯಾಸಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಔರಾದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಉರ್ವಶಿ ಕೊಡಲಿ ಮಾತನಾಡುತ್ತಾ ಯೋಗದಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಂಜುಕುಮಾರ ಅಪ್ಪೆ ಸರ್ಕಾರಿ ಪದವಿ ಮಹಾವಿದ್ಯಾಲಯ (ಮಹಿಳಾ) ಬೀದರನ ಸಹಾಯಕ ಪ್ರಾಧ್ಯಾಪರು ಸೂರ್ಯ ನಮಸ್ಕಾರ ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಗೋಪಾಲ ಬಡಿಗೇರ್ ವಹಿಸಿಕೊಂಡು ಮಾತನಾಡುತ್ತಾ ಧ್ಯಾನ ಪ್ರಾಣಾಯಾಮಗಳು ದೇಹ ಮತ್ತು ಮನಸ್ಸು ಗಟ್ಟಿಗೊಳಿಸುತ್ತವೆ, ಮತ್ತು ಆಧುನಿಕ ಜೀವನ ಶೈಲಿ ಕೈಬಿಟ್ಟು ಬದುಕಬೇಕೆಂದು ನುಡಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಜಗದೇವಪ್ಪಾ ಚಕ್ಕಿ ವಂದನಾರ್ಪಣೆ ಮಾಡಿದರು. ಪ್ರಾರಂಭದಲ್ಲಿ ಕುಮಾರಿಯರಾದ ಪಲ್ಲವಿ ಮತ್ತು ಸುಧಾರಾಣಿ ಪ್ರಾರ್ಥನೆ ಗೀತೆ ಹಾಡಿದರು.
ಕಾರ್ಯಗಾರದ ಸಂಯೋಜಕರಾದ ರವೀಂದ್ರ ಖೂಬಾ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಗಾರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಮಹಿಳಾ) ಬೀದರ, ರಾಜೀವ ಗಾಂದಿ ಕಾಲೇಜ ಬಸವಕಲ್ಯಾಣ ಮತ್ತು ಸಿದ್ಧಾರ್ಥ ಕಾಲೇಜು ಬೀದರ ರವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.