ಉಪನ್ಯಾಸ ಮತ್ತು ಕವಿಗೋಷ್ಠಿ
ಬೀದರ:ಜೂ.25: ನಗರದ ಕುಂಬಾರವಾಡದ ಕರುನಾಡು ಸಾಂಸ್ಕøತಿಕ ಸಭಾಂಗಣದಲ್ಲಿ ಕನ್ನಡ ಸಂಘ ಬೀದರ ವತಿಯಿಂದ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಜರುಗಿತು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಬೀದರನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ ಪಾಟೀಲ್‍ರವರು ಕನ್ನಡ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬೀದರ ಜಿಲ್ಲೆಯಲ್ಲಿ ಕನ್ನಡ ಪರ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿರುವುದು ಸಂತಸದ ವಿಷಯ, ಪ್ರಸ್ತುತ ಆರೋಗ್ಯವಂತ ಸಮಾಜಕ್ಕೆ ಪೂರಕವಾದ ಸಾಹಿತ್ಯ ಕೃತಿಗಳು ಹೊರಬರಲಿ ಎಂದು ನುಡಿದರು.
ಬೀದರ ಜಿಲ್ಲಾ ವಚನಾಮೃತ ಕನ್ನಡ ಸಂಘದ ಅಧ್ಯಕ್ಷರಾದ ಪೆÇ್ರೀ. ಸಿದ್ರಾಮಪ್ಪಾ ಮಾಸಿಮಾಡೆ, ರವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಕನ್ನಡ ನಾಡು-ನುಡಿಯ ಅಂತರಕರಣದಿಂದ ಪ್ರೀತಿ, ಸ್ವಾಭಿಮಾನ ಹೊರಹೊಮ್ಮಬೇಕು. ಅಕ್ಷರಸ್ಥರಾದ ನಾವು ಆಂಗ್ಲಭಾಷೆ ವ್ಯಾಮೋಹದಿಂದ ಮದುವೆ ಇನ್ನಿತರ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಗಳಲ್ಲಿ ಇಂಗ್ಲೀಷ ಪದಗಳು ಕಂಡುಬರುತ್ತಲಿವೆ. ಕನ್ನಡದ ಅಂಕಿ ಸಂಖ್ಯೆಗಳು ಬಳಕೆಯಲ್ಲಿ ತರಲಾರದ ನಿಮಿತ್ಯ ಮುಂದಿನ ದಿನಗಳಲ್ಲಿ ಕನ್ನಡ ಅಂಕಿ-ಸಂಖ್ಯೆಗಳು ಮಾಯವಾಗುತ್ತಿವೆ. ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಗೆ ಕುತ್ತುಬರದಂತೆ, ಕನ್ನಡ ನಾಡು-ನುಡಿ ಸಂರಕ್ಷಣೆ ಮಾಡುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.
ಬೀದರದ ಹಿರಿಯ ಯೋಗ ಶಿಕ್ಷಕರಾದ ಗುರುನಾಥ ಮೂಲಗೆಯವರು ಯೋಗದ ಮಹತ್ವ ಕುರಿತು ಮಾತನಾಡುತ್ತಾ ಸಾವಿರಾರು ವರ್ಷಗಳ ಹಿಂದಿನಿಂದ ಪತಂಜಲಿ ಗುರುಗಳಿಂದ ಯೋಗ, ಪ್ರಾಣಾಯಾಮ, ಧ್ಯಾನ ಬಂದಿದೆ. ಜಗತ್ತಿನಲ್ಲಿ ಸುಮಾರು 200 ದೇಶಗಳು ಯೋಗಾ ಮಾಡುತ್ತಲ್ಲಿದ್ದಾರೆ. 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜಗತ್ತಿನೆಲ್ಲಡೆ ಆಚರಿಸುತ್ತಿದ್ದಾರೆ. ಯೋಗ, ವಾಯು ವಿಹಾರ ಮಾಡುವುದರಿಂದ ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ, ಅಧ್ಯಾತ್ಮೀಕವಾಗಿ ಸದೃಢವಾಗುತ್ತಾನೆ. ಪತಂಜಲಿ ಅಷ್ಠಾಂಗ ಯೋಗದಲ್ಲಿ ಯಮ ಮತ್ತು ನಿಯಮಗಳು ಪ್ರಮುಖವಾಗಿವೆ. ವ್ಯಕ್ತಿ ನಿಯಮಿತವಾಗಿ ಯೋಗ ಮಾಡುವುದರಿಂದ ನಿರೋಗಿ ಒತ್ತಡದಿಂದ ಹೊರಬಂದು ಶಾಂತಿಯ ಬದುಕು ಮಾಡಬಹುದು. ಪ್ರಾಣಾಯಮದಲ್ಲಿ ಬಸ್ತಿಕಾ, ಕಪಾಲಭಾತಿ, ಅನುಲೋಮ-ವಿಲೋಮ, ಬ್ರಾಹ್ಮಿ, ಶೀತಲಿ ಪ್ರಾಣಾಯಮ ಮಾಡುವುದರಿಂದ ವ್ಯಕ್ತಿ ನಿರೋಗಿಯಾಗಿ ಆರೋಗ್ಯವಂತ, ನೆಮ್ಮದಿಯ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ವಿಷಯ ಪ್ರತಿಪಾದಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಬಸವರಾಜ ಮಯೂರ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ, ವ್ಯಕ್ತಿಯು ಏಕಾಗೃತೆ ಇದ್ದಾಗ ಅಂತರಂಗದಿಂದ
ಭಾವನೆಗಳು ಹೊರಬಂದು ಸಾಹಿತ್ಯ ರಚನೆಯಾಗುತ್ತದೆ. ಮುಂದುವರೆದು ಮಾತನಾಡುತ್ತಾ, ದಾಂಪತ್ಯದ ಜೀವನ ಸಮರಸದಿಂದ ಕೂಡಬೇಕಾದರೆ ಯೋಗ ಅವಶ್ಯಕತೆ ಇದೆ. ಯೋಗಕ್ಕೂ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ವ್ಯಕ್ತಿ ಸಾಹಿತ್ಯ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿದರೆ ಶಾಂತಿ ಲಭಿಸುತ್ತದೆ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ|| ಸಂಜೀವಕುಮಾರ ಅತಿವಾಳೆ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ಕನ್ನಡ ಸಂಘ-ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು. ವೇದಿಕೆಯ ಮೇಲೆ ಚಿತ್ರಕಲಾ ಶಿಕ್ಷಕರಾದ ಶ್ರೀಕಾಂತ ಬಿರಾದಾರ ರವರನ್ನು ಸನ್ಮಾನಿಸಲಾಯಿತು.
ಕನ್ನಡ ಪ್ರಗತಿ ಸಂಘದ ಗೌರವಾಧ್ಯಕ್ಷರಾದ ಡಾ|| ರಮೇಶ ಮೂಲಗೆ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಜಾಗತೀಕರಣ ಜಗತ್ತಿನಲ್ಲಿ ನಮ್ಮ ಹಬ್ಬ, ಸಂಸ್ಕೃತಿ, ಪರಂಪರೆ, ಆಚಾರವಂತಿಕೆ ಬದಲಾಗುತ್ತಲಿವೆ. ಆದುದ್ದರಿಂದ ಹಿರಿಯರು, ನಮ್ಮ ಪೂರ್ವಜರು ಮಾಡುತ್ತಕ್ಕಂತಹ ಹಬ್ಬ Àರಿದಿನಗಳು ಮುಂದುವರೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಕನ್ನಡ ಪ್ರಗತಿ ಸಂಘದ ಅಧ್ಯಕ್ಷರಾದ ಉಮಾಕಾಂತ ಮೀಸೆ ರವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ಸಂಘ ಸುಮಾರು 26 ವರ್ಷಗಳಿಂದ ನಡೆದು ಬಂದಿದೆ. ಕನ್ನಡ ನಾಡು, ನುಡಿ ಸೇವೆ ಮಾಡುವುದಾಗಿದೆ, ಇನ್ನು ಮುಂದೆ ಶಾಲಾ-ಕಾಲೇಜು ಮಟ್ಟದಲ್ಲಿ ಸಾಹಿತಿ, ವಿದ್ವಾಂಸರ, ದಾಸರ, ಸಂತರ ಕುರಿತು ಮಾಸಿಕವಾಗಿ ಸಾಹಿತ್ಯ ಚಿಂತನೆ ಮಾಡುವ ಉದ್ದೇಶವಾಗಿದೆ ಮತ್ತು ಕನ್ನಡದಲ್ಲಿ ಹೆಚ್ಚು ಅಂಕಗಳು ಗಳಿಸುವ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಕವಿಗಳಾದ ಚೆನ್ನಮ್ಮಾ, ಓಂಕಾರ ಪಾಟೀಲ್, ಅವಿನಾಶ ಸೋನೆ, ಮುರಳಿನಾಥ ಮೇತ್ರೆ, ಆತ್ಮಾನಂದ ಬಂಬುಳಗೆ, ಸಂಗೀತಾ ಕಾಂಬಳೆ, ಆಶಾ ಲಕ್ಕಶೆಟ್ಟೆ, ಅಜೀತ ನೆಳಗೆ, ರೋಹಿದಾಸ ಕಾಂಬಳೆ, ಎಂ.ಡಿ. ನದೀಮ್, ಧನರಾಜ ಅಣಕಲೆ, ದಿಲೀಪ ಮೋಘಾ ಮತ್ತು ಬಾಪು ಮಡಕೆ ರವರು ಕವನ ವಾಚನ ಮಾಡಿದರು.
ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘ, ಡಾ|| ಚನ್ನಬಸವ ಪಟ್ಟದೇವರ ಪ್ರಸಾದ ನಿಲಯ, ಬೀದರದ ಶಕುಂತಲಾ ಮತ್ತು ಕಸ್ತೂರಬಾಯಿ ಬಿರಾದಾರ ವಚನ ಗಾಯನ ನಡೆಸಿಕೊಟ್ಟರು. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ|| ರಾಜಕುಮಾರ ಅಲ್ಲೂರೆ ನಿರೂಪಿಸಿದರೆ, ವಿಜಯಕುಮಾರ ಎಕೇಳ್ಳೆ ವಂದಿಸಿದರು. ಪ್ರಮುಖರಾದ ಶಂಭುಲಿಂಗ ವಾಲದೊಡ್ಡಿ, ರಮೇಶ ಬಿರಾದಾರ, ಸಂತೋಷ ಜೋಳದಾಬಕೆ, ರಾಮನಗೌಡ, ಮೀನಾಕ್ಷಿ ಪಾಟೀಲ್, ಸವಿತಾ, ಲಕ್ಷಿ??ೀ ಮುಂತಾದವರು ಉಪಸ್ಥಿತರಿದ್ದರು.