13 ಲಯನ್ಸ್ ಕ್ಲಬ್‍ಗಳ ಅಧ್ಯಕ್ಷರಾಗಿ ಡಾ.ಶ್ರೀನಿವಾಸ ರೆಡ್ಡಿ ಆಯ್ಕೆ
ಸೇಡಂ,ಜೂ,25:ತಾಲೂಕಿನ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನೂ ಅಳವಡಿಸಿಕೊಂಡಿರುವ ಪರಿಸರ ಪ್ರೇಮಿ
ಡಾ.ವೆಂಕಟ್ ರೆಡ್ಡಿ ಪಾಟೀಲ್ ಆಸ್ಪತ್ರೆ, ಸ್ಥಾಪಕ ಮತ್ತು ಆಡಳಿತಾಧಿಕಾರಿ, ಡಾ.ಶ್ರೀನಿವಾಸರೆಡ್ಡಿ ವಿ. ಪಾಟೀಲ್ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಅಡಿಯಲ್ಲಿ ಬರುವ 13 ಲಯನ್ಸ್ ಕ್ಲಬ್‍ಗಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರದೇಶ 6 – ಎಚ್.ಕೆ ಪ್ರದೇಶದ ಅಖಿಲ ಕರ್ನಾಟಕ ಕ್ಲಬ್‍ಗಳಾದ 1.ಸೇಡಂ,2.ಗುಲ್ಬರ್ಗ 3.ಗುಲ್ಬರ್ಗ ನೃಪತುಂಗ, 4.ಗುರುಮಿಟ್ಕಲ್, 5.ರಾಯಚೂರು, 6.ರಾಯಚೂರು ಪರಂಪರೆ,7.ಮಾನ್ವಿ,8.ಸಿರವಾರ,9.ಶಹಾಪುರ,10.ಶೋರಾಪುರ,11.ಯಾದಗಿರಿ,12. ಸೈದಾಪುರ.13.ಹುಣಸಗಿ
1ನೇ ಜುಲೈ 2024 ರಿಂದ 30ನೇ ಜೂನ್ 2025 ರವರೆಗೆ ಜಿಲ್ಲೆ 320ಂ ನ ಪ್ರಾದೇಶಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದೇನೆ ಎಂದು . ಶ್ರೀನಿವಾಸರೆಡ್ಡಿ ವಿ. ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.