ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.25- ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಮಹತ್ತರ ಐದುಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್‍ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದುರಾಜ್ಯ ಸರ್ಕಾರದಐದುಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿಕಾರ್ಯನಿರ್ವಹಿಸಬೇಕು ಎಂದುಜಿಲ್ಲಾಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಐದುಗ್ಯಾರಂಟಿ ಯೋಜನೆಗಳು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿವಿವಿಧ ಹಂತಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕಾರ್ಯನಿರ್ವಹಿಸಲಿದೆ. ಜಿಲ್ಲೆಗೆ ನೇಮಕವಾಗಿರುವಗ್ಯಾರಂಟಿ ಯೋಜನೆಗಳ ಪ್ರಾಧಿಕಾರದಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆಇಂದು ಸನ್ಮಾನಿಸಿ ಅಭಿನಂದನೆಸಲ್ಲಿಸಲಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಾಧಿಕಾರದಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಕಾರ್ಯೋನ್ಮುಖರಾಗಲಿದ್ದಾರೆಎಂದರು.
ಸಮಾಜಕಲ್ಯಾಣ ಸಚಿವÀಡಾ. ಹೆಚ್.ಸಿ. ಮಹದೇವಪ್ಪಅವರು ಮಾತನಾಡಿ ಸ್ವಾವಲಂಬಿ, ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರಗ್ಯಾರಂಟಿ ಯೋಜನೆಗಳನ್ನು ಜಾರಿಗೆತಂದಿದೆ. ಈ ಯೋಜನೆಗಳ ಅನುಷ್ಠಾನ ಹೇಗೆ ಸಾಗಿದೆ. ಏನಾದರು ಸಮಸ್ಯೆಗಳು ಇದೆಯೇ ಎಂಬ ಬಗ್ಗೆ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದಅಧ್ಯಕ್ಷರು, ಸದಸ್ಯರು ಫಲಾನುಭವಿಗಳಿಗೆ ತೆರಳಿ ತಿಳಿಯಬೇಕು ಎಂದರು.
ಬದುಕಿನಲ್ಲಿ ಭರವಸೆ, ಆತ್ಮಸ್ತೈರ್ಯತುಂಬುವ ಕೆಲಸ ಮಾಡಬೇಕು. ಮಾಸಿಕ ಆದಾಯಇಲ್ಲದ ಕುಟುಂಬಗಳಿಗೆ ನೆರವಾಗುವ ಸರ್ಕಾರದ ಯೋಜನೆಗಳನ್ನು ಜನರಿಗೆತಲುಪಿಸುವ ದಿಸೆಯಲ್ಲಿ ಪ್ರಾಧಿಕಾರ ಮುಂದಾಗಬೇಕು. ಸರ್ಕಾರದಉದ್ದೇಶ ಯಶಸ್ಸುಗೊಳಿಸುವ ನಿಟ್ಟಿನಲ್ಲಿಕಾರ್ಯನಿರ್ವಹಿಸಬೇಕು ಎಂದು ಸಚಿವರಾದಡಾ. ಹೆಚ್.ಸಿ. ಮಹದೇವಪ್ಪಅವರು ತಿಳಿಸಿದರು.
ಜಿಲ್ಲಾ ಮಟ್ಟದಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಜಿಲ್ಲಾಅಧ್ಯಕ್ಷರಾದಹೆಚ್.ವಿ. ಚಂದ್ರುಅವರು ಮಾತನಾಡಿಆರ್ಥಿಕವಾಗಿ ಹಾಗೂ ಹಿಂದುಳಿದ ಜನರ ಸಬಲೀಕರಣ ಮಾಡುವಉದ್ದೇಶ ಸರ್ಕಾರದಗ್ಯಾರಂಟಿ ಯೋಜನೆಗಳದ್ದಾಗಿದೆ. ಇದರಮೇಲುಸ್ತುವಾರಿಗಾಗಿ ಅನುಷ್ಠಾನ ಸಮಿತಿತರಲಾಗಿದೆ. ಸಚಿವರು, ಶಾಸಕರು, ಅಧಿಕಾರಿಗಳ ಸಹಕಾರದೊಂದಿಗೆಜಿಲ್ಲೆಯಲ್ಲಿಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ದುಡಿಯುವುದಾಗಿ ನುಡಿದರು.
ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯಲ್ಲಿ ಯೋಜನೆಗಳಲ್ಲಿ ಆಗಿರುವ ಪ್ರಗತಿ ಮಾಹಿತಿಯನ್ನು ಸಭೆಗೆ ವಿವರಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಹೆಚ್.ಎಂ, ಗಣೇಶ್ ಪ್ರಸಾದ್, ಸಿ.ಎನ್. ಮಂಜೇಗೌಡ, ಡಾ. ಡಿ. ತಿಮ್ಮಯ್ಯ, ಕಾಡಾಅಧ್ಯಕ್ಷ ಪಿ. ಮರಿಸ್ವಾಮಿ, ಕರ್ನಾಟಕರಾಜ್ಯಉಗ್ರಾಣ ನಿಗಮದಅಧ್ಯಕ್ಷಎಸ್. ಜಯಣ್ಣ, ಚೂಡಾಅಧ್ಯಕ್ಷ ಮಹಮ್ಮದ್‍ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯರ್ವಾಹಕಾಧಿಕಾರಿಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿಜಿಲ್ಲಾಧಿಕಾರಿಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಡಾ. ಸಂತೋಷ್‍ಕುಮಾರ್, ಜಿಲ್ಲಾ ಮಟ್ಟದಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಉಪಾಧ್ಯಕ್ಷ ಸೋಮೇಶ್ವರ, ಸಿದ್ದರಾಜು, ಎಸ್. ಪ್ರಭುಪ್ರಸಾದ್, ಎಸ್.ಆರ್.ಎಸ್. ರಾಜಶೇಖರ, ಕೆ.ಎನ್. ಪ್ರದೀಪ್‍ಕುಮಾರ್, ಸದಸ್ಯರಾದಆರ್. ಉಮೇಶ್, ಶಿವಮೂರ್ತಿ, ಪಿ.ಪಿ. ನಾಗರಾಜಮೂರ್ತಿ, ಕೆ.ಬಿ. ಚಿನ್ನಸ್ವಾಮಿ, ಉಮಾಪತಿ, ಎಂ.ಪ್ರದೀಪ್, ರವಿಕುಮಾರ್, ರಾಚಪ್ಪ, ದಯಾನಿಧಿ, ರವಿ, ಅಕ್ಬರ್ ಪಾಷ, ರಾಜೇಂದ್ರ. ಆರ್, ಹೆಚ್.ಎನ್. ಜಯರಾಜು, ಭಾಗ್ಯ, ದೇವರಾಜು. ಎಂ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.