ಶಿಕ್ಷಣ ಸದ್ಬಳಕೆಗೆ ಸದುಪಯೋಗಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ
ಆಳಂದ: ಜೂ.25:ಶಿಕ್ಷಣ ಬಹು ಅಮೂಲ್ಯ ಸಂಪತ್ತಾಗಿದ್ದು ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ದುರುಪಯೊಗಪಡಿಸಿಕೊಳ್ಳದೆ ಸದುಪಯೊಗ ಮಾಡಿಕೊಳ್ಳಬೇಕು. ಇದರಿಂದ ಮಾತ್ರ ವಿದ್ಯಾರ್ಥಿ ಜೀವನ ಉಜ್ವಲವಾಗಲಿದೆ ಎಂದು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ್ ಅವರು ಹೇಳಿದರು.
ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಕೆಕೆಆರ್‍ಡಿಬಿಯಿಂದ ಮಂಜೂರಾದ ಸುಮಾರು 30 ಲಕ್ಷ್ಯ ರೂ. ವೆಚ್ಚದ ಸರ್ಕಾರಿ ಪ್ರಾಥಮಿಕ ಶಾಲಾ ಕಂಪೌಂಡ ಗೋಡೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿ 5 ಪಿಯು ಮತ್ತು 5 ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಲಾಗಿದೆ. ಇವುಗಳನ್ನು ಆದಷ್ಟ ಬೇಗ ಪ್ರಾರಂಭಿಸಲಾಗುವುದು. ಪಾಲಕರು ಟಿವಿ, ಮೊಬೈಲ್‍ಗಳ ಬಳಕೆ ಕಡಿಮೆ ಮಾಡಿ ಮಕ್ಕಳ ಭವಿಷ್ಯದ ಕಡೆ ಗಮನ ಹರಿಸಬೇಕು. ಇಲ್ಲವಾದರೆ ಅವರ ಭವಿಷ್ಯ ಹಾಳಾಗಲಿದೆ. ಶಿಕ್ಷಕ ಮತ್ತು ಪಾಲಕರು ಸಂಪರ್ಕದ ಕೊಂಡಿಯಂತೆ ಇದ್ದರೆ ಮಾತ್ರ ವಿದ್ಯಾರ್ಥಿಗಳು ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಸಿಆರ್‍ಸಿ ಅಶೋಕ ಚವ್ಹಾಣ್, ಸಿದ್ದಲಿಂಗಯ್ಯ ಸ್ವಾಮಿ, ಸುಭಾಷ ಪಾಟೀಲ್, ರಾವಸಾಬ ಪಾಟೀಲ್, ವಿಶ್ವನಾಥ ಸರಸಂಬಿ, ಪಿಡ್ಲ್ಯೂಡಿ ಇಲಾಖೆ ಎಇಇ ಆನಂದ, ಜೆಇಗಳಾದ ಸೂರ್ಯಕಾಂತ ಗಾಯಕವಾಡ, ಗುರುನಾಥ ಶಿವಪುರೆ, ವಿಠ್ಠಲ ಜಾಧವ, ಈರಣ್ಣ ಯಲ್ದೆ,ವಿನಾಥ, ಕೇವಂಟಗಿ, ಶರಣಬಸಪ್ಪ ಚಂಡಕೆ, ಶರಣು ಮಾಂಗ, ಶಿವಾನಂದ ಯಲ್ದೆ, ಸಿದ್ದು ಕಾಮನೆ, ಶಿವಲಿಂಗಪ್ಪ ಪೂಜಾರಿ, ಶಿವಪ್ಪ ಝಳಕಿ, ಶಿವಕುಮಾರ ಯಲ್ದೆ, ನಬಿಲಾಲ ಮಾಡ್ಯಾಳ, ಭಾಷಾ ಅಳ್ಳಗಿ, ಸಿದ್ದಲಿಂಗ ಭಾಸಗಿ, ಮುಖ್ಯಗುರು ಮಾಳಪ್ಪ ನಾಗಲೇಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಮುಂಚೆ ಮಾಡಿಯಾಳ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಮಂಜೂರಾದ ಸುಮಾರು 55 ಲಕ್ಷ್ಯ ರೂ.ಗಳ ವೆಚ್ಚದ ವೈದ್ಯರ ವಸತಿಗೃಹ ಮತ್ತು ದುರಸ್ತಿ ಕಾಮಗಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಶೌಚಾಲಯ ಕಾಮಗಾರಿಗೆ ಶಾಸಕರು ಅಡಿಗಲು ನೆರವೇರಿಸಿ ಚಾಲನೆ ನೀಡಿದರು.
ಹಡಲಗಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 1.18ಕೋಟಿ ರೂ. ವೆಚದ 8 ಕೋಣೆಗಳ ನಿರ್ಮಾಣಕ್ಕೂ ಶಾಸಕರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.