ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.25: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಗಿಡಗಳನ್ನು ನೆಟ್ಟು ಅವುಗಳನ್ನು ಪೆÇೀಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಡುಗೆ ನೀಡುವುದಾಗಿದೆ ಎಂದು ಸಮಾಜಸೇವಕ ಹಾಗೂ ಆರ್‍ಟಿಓ ಅಧಿಕಾರಿ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಸಮಾಗಮ ವೆಲ್ಫೇರ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರತೀವರ್ಷ ನಾನಾ ಕಾರಣಗಳಿಂದಾಗಿ ಅರಣ್ಯದ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ಇದು ಪರಿಸರ ಅಸಮತೋಲನಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ. ಪರಿಸರ ಅಸಮತೋಲನದಿಂದ ನಾವೆಲ್ಲರೂ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಜಾಗತಿಕ ತಾಪಮಾನ ಅಧಿಕವಾಗಿ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮಾನವನಿಗೆ ಅಪಾಯ ಕಟ್ಟಿಟ್ಟಬುತ್ತಿ. ಆದ್ದರಿಂದ ನಾವುಗಳೆಲ್ಲರೂ ಹುಟ್ಟುಹಬ್ಬ, ವಿವಾಹವಾರ್ಷಿಕೋತ್ಸವ, ಮುಂತಾದ ಕಾರ್ಯಕ್ರಮಗಳನ್ನು ಆಚರಿಸಿ ಹಣ ಪೆÇೀಲುಮಾಡುವ ಬದಲು ನಾಲ್ಕು ಗಿಡಗಳನ್ನು ನೆಟ್ಟು ಪೆÇೀಷಿಸಿದರೆ ಅದೇ ನಾವು ಈ ಪರಿಸರಕ್ಕೆ ನೀಡುವ ಕೊಡುಗೆ ಎಂದರು.
ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ ಹಿಂದಿನಿಂದಲೂ ಪರಿಸರ ಸಂರಕ್ಷಣೆ ಬಗ್ಗೆ ವಿಷಯಗಳು ಚರ್ಚೆಯಾಗುತ್ತಿವೆ ಆದರೆ ಪ್ರಸ್ತುತದಲ್ಲಿ ಆರೋಗ್ಯಕರ ಜೀವನಕ್ಕಾಗಿ ಮರ ಬೆಳೆಸಿ ನಾಡು ಉಳಿಸಿ ಇಲ್ಲದಿದ್ದರೆ ಉತ್ತಮ ಪರಿಸರವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದರು. ಅದಕ್ಕೊಂದು ಪರಿಪೂರ್ಣತೆ ಸಿಗುತ್ತದೆ, ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆ ಅತ್ಯಾವಶ್ಯಕವಾಗಿರಬೇಕು ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಹಾಗೂ ಪರಿಸರವನ್ನು ಕೊಡುಗೆಯಾಗಿ ನೀಡಬಹುದು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಗಮ ವೆಲ್ಫೇರ್ ಫೌಂಡೇಶನ್ ನಿರ್ದೇಶಕ ಪಾಂಡು ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವಂತ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ ಹಳ್ಳಿಗಳ ಪರಿಸ್ಥಿಯೇ ಹೀಗಾದರೆ ಪಟ್ಟಣಗಳ ಸ್ಥಿತಿಗತಿ ಹೇಗೆ ಎಂದು ಬೇಸರ ವ್ಯಕ್ತಪಡಿಸಿ, ಹಳ್ಳಿಗಳಲ್ಲಿ ಸಗಣಿ ತುಂಬುತಿದ್ದ ತಿಪ್ಪೆಗಳು ಇಂದು ಪ್ಲಾಸ್ಟಿಕ್ ಗಳ ಗುಂಡಿಗಳಾಗಿವೆ ಹಾಗೆಯೇ ಪ್ರಸ್ತುತ ವರ್ಷದಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನ ಕಾಣಬೇಕಾಯಿತು, ಇದೆ ರೀತಿ ಮುಂದುವರೆದರೆ ಬದುಕುವ ಆಸೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಆದ್ದರಿಂದ ಆರೋಗ್ಯಕರ ಜೀವನ ನಡೆಸಲು ಪರಿಸರ ಸಂರಕ್ಷಶಿ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಕೆ.ಎಂ.ವಾಸು ಮಾತನಾಡಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಹೆಚ್ಚುಹೆಚ್ಚು ಜರುಗಬೇಕು ಇಂತಹ ಅರಿವು ಹಾಗೂ ಶಿಕ್ಷಣ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನಮುಟ್ಟಬೇಕು, ನಾಗರೀಕ ಸಮಾಜ ಎಷ್ಟೇ ಪ್ರಗತಿ ಕಂಡರೂ ಪ್ರಕೃತಿ ವಿರೋಧಿ ಕೃತ್ಯ ಎಸಗಬಾರದು, ಅತಿಯಾದರೆ ವಿಕೋಪಗಳು ಕಟ್ಟಿಟ್ಟ ಬುತ್ತಿ, ನಮ್ಮೆಲ್ಲರನ್ನ ರಕ್ಷಿಸುತ್ತಿರುವ ಪ್ರಕೃತಿಯನ್ನ ನಾವು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಸಮಾಗಮ ವೆಲ್ಫೇರ್ ಫೌಂಡೇಶನ್ ವತಿಯಿಂದ ಶಾಲಾ ಕಾಲೇಜು ಮಕ್ಕಳಿಗೆ ಪ್ರಬಂಧ ಹಾಗೂ ಭಾಷಣ ಏರ್ಪಡಿಸಿ ವಿಜೇತರಿಗೆ ಪುಸ್ತಕ ಹಾಗೂ ಟ್ರೋಫಿಗಳನ್ನ ನೀಡಿ ಪೆÇ್ರತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಯುವರಾಜ್, ಗ್ರಾಮ ಪಂಚಾಯತಿ ಸದಸ್ಯ ಎಸ್.ಕೆ.ಪ್ರಕಾಶ್, ಮುಖ್ಯಶಿಕ್ಷಕಿ ನೀಲಮ್ಮ, ಸಮಾಗಮ ವೆಲ್ಫೇರ್ ಫೌಂಡೇಶನ್ ನಿರ್ದೇಶಕಿ ಸುಮಿತ್ರ ವಕೀಲ ರಘು, ಆರ್ಥಿಕ ಸಲಹೆಗರರಾದ ಪ್ರಮೋದ್, ಕಿರಣ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.