ಐಐಟಿಯಲ್ಲಿ ಕೆ.ಮೋನಿಕಾ ಉತ್ತೀರ್ಣ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.25: ತಾಲೂಕಿನ ಕಿಕ್ಕೇರಿ ಹೋಬಳಿಯ ಕಾಳೇನಹಳ್ಳಿ ನಿವಾಸಿ ಕುಮಾರ್ ರವರ ಪುತ್ರಿ ಕೆ.ಮೋನಿಕಾ ಅವರು ಐಐಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉಚಿತ ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿನಿಗೆ ಪ್ರಗತಿ ಶಾಲೆಯ ಪರವಾಗಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು
ಈ ಕುರಿತು ಮಾತನಾಡಿದ ಪ್ರಗತಿ ಶಾಲೆಯ ಅಧ್ಯಕ್ಷರಾದ ಟಿ.ಶೈಲಜಾ ತಾಲೂಕಿನ ಕಿಕ್ಕೇರಿ ಹೋಬಳಿಯ ಕಾಳೇನಹಳ್ಳಿ ವಿದ್ಯಾರ್ಥಿನಿ ಕೆ.ಮೋನಿಕಾ ಐಐಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಕಾಲೇಜು ಅಭ್ಯಾಸಕ್ಕೆ ಆಯ್ಕೆಯಾಗಿರುತ್ತಾರೆ ಅವರಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಉಚಿತವಾಗಿ ದೊರೆಯುತ್ತದೆ. ಗುಜರಾತಿನ ಗಾಂಧಿನಗರದ ಐಐಟಿ ಕಾಲೇಜಿಗೆ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿರುತ್ತಾರೆ ಯಾವುದೇ ಸೌಲಭ್ಯಗಳಿಲ್ಲದ ಕಾಳೇನಹಳ್ಳಿಯ ಗ್ರಾಮೀಣ ಪ್ರತಿಭೆಗೆ ಉತ್ತಮ ಅವಕಾಶ ಸಿಕ್ಕಿರುವುದು ಅಭಿನಂದನಾರ್ಹ ಆಗಿದೆ ಇದು ಇತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಪ್ರೇರಣೆಯಾಗಿದೆ ಎಂದರು.
ಜಿಲ್ಲಾ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ .ಕಾಳೇಗೌಡ ಪ್ರಗತಿ ಶಾಲೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಂ.ಕೆ.ಮೋನಿಕಾ ಹಾಗೂ ಪೆÇೀಷಕರಾದ ಕುಮಾರ್, ರೇಖಾ ಭಾಗವಹಿಸಿದ್ದರು.