ಸೆಂಟ್ ಮೇರಿಸ್ ಶಾಲೆಯ ಸಂಸತ್ ರಚನೆ
ಸಂಜೆವಾಣಿ ವಾರ್ತೆ
ಹನೂರು ಜೂ 25 :- ತಾಲ್ಲೂಕಿನ ಮಾರ್ಟಳ್ಳಿ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಸಂಸತ್ ರಚನೆಯನ್ನು ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಮತದಾನ ಏರ್ಪಡಿಸಲಾಯಿತು.
ಚುನಾವಣಾ ಪೂರ್ವ ತಯಾರಿಯಂತೆ ಶಾಲಾ ವಿದ್ಯಾರ್ಥಿಗಳಿಗೆ ಮತದಾನಕ್ಕೂ ಒಂದು ವಾರ ಮುಂಚಿತವಾಗಿ ಅದಿಸೂಚನೆ ಹೊರಡಿಸಿ ಮರುದಿನ ನಾಮಪತ್ರ ಸಲ್ಲಿಸಲು ಹಾಗೂ ಹಿಂಪಡೆಯಲು ಅವಕಾಶ ಕಲ್ಪಿಸಲಾಯಿತು. ಶಾಲೆಯ 13 ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರಿಗೆ ನಾಮಪತ್ರ ಸಲ್ಲಿಸುವ ಮೂಲಕ ಸ್ಪರ್ದಿಸಿದರು.
ನಾಮಪತ್ರ ಸಲ್ಲಿಸಿದ್ದ ಯಾವುದೇ ವಿದ್ಯಾರ್ಥಿಗಳು ನಾಮಪತ್ರವನ್ನು ಹಿಂಪಡೆಯಲಿಲ್ಲ ಹಾಗಾಗಿ ಸ್ಪರ್ಧಾರ್ಥಿಗಳಿಗೆ ಚಿಹ್ನೆ ಹಾಗೂ ಕ್ರಮ ಸಂಖ್ಯೆಯನ್ನು ಪ್ರಕಟಿಸಿ ಮಾದರಿ ಮತಪತ್ರದೊಂದಿಗೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಚುನಾವಣಾ ನಿಗದಿಯಂತೆ ಮತಗಟ್ಟೆಯ ಅಧಿಕಾರಿಗಳ ಸಮ್ಮುಖದಲ್ಲಿ ಮತದಾನ ನಡೆಯಿತು ಒಟ್ಟು 231 ಮತದಾರರ ಪೈಕಿ 120 ವಿದ್ಯಾರ್ಥಿಗಳು 94 ವಿದ್ಯಾರ್ಥಿನಿಯರು ಮತ ಚಲಾಯಿಸುವ ಮೂಲಕ ಶೇ. 92.64 ರಷ್ಟು ಮತದಾನ ನಡೆಯಿತು.
ಗಂಡು ಮಕ್ಕಳ ಪೈಕಿ ಪ್ರಿಸ್ಟ್ ನ್ 59 ಮತಗಳು. ಹೆಣ್ಣು ಮಕ್ಕಳ ಪೈಕಿ ಐನ್ ಸ್ಲಿ 75 ಮತಗಳಿಸುವುದರೊಂದಿಗೆ ಆಯ್ಕೆಯಾಗಿರುತಾರೆ. ಈ ಎಲ್ಲ ಪ್ರಕ್ರಿಯೆಗಳು ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ನಡೆದಿರುವುದು ವಿಶೇಷವಾಗಿರುತ್ತದೆ.