ಗುಂಡಾಲ್ ಜಲಾಶಯ ಕಾಲುವೆಗಳಗಳ ಅಭಿವೃದ್ಧಿಗೆ ಕ್ರಮ: ಮಂಜುನಾಥ್
ಸಂಜೆವಾಣಿ ವಾರ್ತೆ
ಹನೂರು ಜೂ 25 :- ಕಾಮಗೆರೆ ಸಮೀಪದ ಗುಂಡಾಲ್ ಜಲಾಶಯಕ್ಕೆ ಶಾಸಕ ಎಂ.ಆರ್ ಮಂಜುನಾಥ್ ರವರು ಭೇಟಿ ನೀಡಿ ಜಲಾಶಯ ಕಾಲುವೆಗಳಗಳನ್ನು ವೀಕ್ಷಣೆ ಮಾಡಿ ಇಂಜಿನಿಯರ್ ಅವರಿಂದ ಮಾಹಿತಿ ಪಡೆದು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಶಾಸಕ ಎಂ ಆರ್ ಮಂಜುನಾಥ್ ರವರು ಗುಂಡಲ್ ಜಲಾಶಯದ ವಸತಿ ಗೃಹದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ನಾಲೆಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು. ಜಲಾಶಯ ಕಾಲುವೆಗಳ ಅಭಿವೃದ್ಧಿಪಡಿಸುವ ಯೋಜನೆಯ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲು ಚರ್ಚೆ ನಡೆಸಿದರು.
ಗುಂಡಲ್ ಜಲಾಶಯ ವ್ಯಾಪ್ತಿಯಲ್ಲಿ ಬರುವ ಬಲ ದಂಡನಾಲೆ ಹಾಗೂ ಎಡ ದಂಡ ನಾಲೆಯ ಕಾಲುವೆಗಳನ್ನು ಮುದ್ದು ಭೇಟಿ ಮಾಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು ಮಾತನಾಡಿ ಮಳೆ ಬಂದಾಗ ಜಲಾಶಯದಲ್ಲಿ ನೀರು ಶೇಖರಣೆಯಾಗಲು ಒಳಹರಿವು ಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕು. ಮಳೆ ಬಂದಾಗ ಜಲಾಶಯದಲ್ಲಿ ನೀರು ಶೇಖರಣೆಯಾಗುವಂತೆ ಅಭಿವೃದ್ಧಿಪಡಿಸಬೇಕು. ಕಾಲುವೆಗಳನ್ನು ಅಭಿವೃದ್ಧಿ ಪಡಿಸಿ.
ಜಲಾಶಯಗಳಿಂದ ನೀರನ್ನು ಹರಿ ಬಿಟ್ಟಾಗ ಕಾಲುವೆಗಳಲ್ಲಿ ಬೆಳೆದು ನಿಂತಿರುವ ಗಿಡ ಗೆಡ್ಡೆಗಳನ್ನು ತೆರವು ಮಾಡಿ ಕಾಲುವೆಗಳಿಂದ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಅಭಿವೃದ್ಧಿಪಡಿಸಲು ಅಗತ್ಯ ಯೋಜನಾ ವರದಿ ತಯಾರಿಸುವಂತೆ ಶಾಸಕರು ಇಂಜಿನಿಯರ್ ರವರಿಗೆ ಸೂಚನೆಯನ್ನು ನೀಡಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಂಜುನಾಥ್ ರವರು ಈ ಭಾಗದ ರೈತರ ಹಿತದೃಷ್ಟಿಯಿಂದ ಕ್ಷೇತ್ರ ವ್ಯಾಪ್ತಿಯ ಪ್ರಮುಖ ನಾಲೆಗಳು ಹಾಗೂ ಅಣೆಕಟ್ಟುಗಳನ್ನು ವೀಕ್ಷಣೆ ಮಾಡಲಾಗುತ್ತಿದ್ದು ಧನಗೆರೆ ಜಹಗೀರದಾರ್ ಅಣೆಕಟ್ಟೆ ಹಾಗೂ ಕಾಲುವೆ ಕಬಿನಿ ಬಲದಂಡೆ ನಾಲೆ ಉಡುತೊರೆ ಹಳ್ಳ ಜಲಾಶಯ ಹಾಗೂ ಕಾಲುವೆಗಳು ಗುಂಡಲ್ ಜಲಾಶಯ ಹಾಗೂ ಇದರ ಎಡದಂಡೆ, ಬಲ ದಂಡೆ ನಾಲೆಗಳನ್ನು ಕಬಿನಿ ಇಲಾಖೆಯ ಅಧಿಕಾರಿಗಳೊಡನೆ ವೀಕ್ಷಣೆ ಮಾಡಿ ಒಟ್ಟಾರೆ ಯೋಜನಾ ವರದಿ ತಯಾರಿಸುವಂತೆ ಸೂಚಿಸಿದ್ದೇನೆ.
ರೈತರ ಜಮೀನುಗಳಿಗೆ ನೀರು ನೀಡಿದರೆ ಸಾಕು ಅವರು ಸಂತೃಪ್ತಿಯಿಂದ ಜೀವನ ನಡೆಸುತ್ತಾರೆ. ನೀರು ನೀಡಿದರೆ ನಮ್ಮಿಂದ ಅವರು ಇನ್ನೇನು ಅಪೇಕ್ಷಿಸಲಾರರು. ರೈತರ ಜೀವನಾಡಿ ಅಣೆಕಟ್ಟುಗಳು ಹಾಗೂ ನಾಲೆಗಳು ಅವುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಅನುದಾನ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಇಂಜಿನಿಯರ್ ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣ, ಮತ್ತು ಕರುಣಾಮಯಿ, ಸಹಾಯಕ ಇಂಜಿನಿಯರ್, ನವೀನ್, ಭಸವೇಶ್, ಹಾಗೂ ಮುಖಂಡರುಗಳಾದ ಹನೂರು ಮಂಜೇಶ್ ಗೌಡ, ಪಾಳ್ಯ ಗೋಪಾಲ್ ನಾಯಕ, ಕಾಮಗೆರೆ ಚಿನ್ನಸ್ವಾಮಿ, ಶಿವು, ಚಿನ್ನವೆಂಕಟ, ಶಿವರಾಂ, ನಾಗರಾಜ್, ಮಹಾದೇವ್ ಸೇರಿದಂತೆ ಇನ್ನಿತರರು ಇದ್ದರು.