ಜೂ. ೨೭ ಕಲ್ಕಿ ೨೮೯೮ ಚಿತ್ರ ಬಿಡುಗಡೆ
ಬೆಂಗಳೂರು,ಜೂ.೨೪-ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ ೨೮೯೮ ಎಡಿ ಜೂನ್ ೨೭ ರಂದು ಬಿಡುಗಡೆಯಾಗಲಿದೆ. ಚಿತ್ರವು ಕನ್ನಡ ಮತ್ತು ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮುಂಗಡ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.
ಮಲ್ಟಿಸ್ಟಾರ್ ಚಿತ್ರ ಕಲ್ಕಿ ಬಗ್ಗೆ ಅಭಿಮಾನಿಗಳು ತುಂಬಾ ಕಾತುರರಾಗಿದ್ದಾರೆ. ಇನ್ನು, ಮುಂಜಾನೆಯೇ ಸಿನಿಮಾದ ಮೊದಲ ಪ್ರದರ್ಶನ ಶುರುವಾಗಲಿದೆ. ಚಿತ್ರಕ್ಕೆ ಭಾರೀ ಕ್ರೇಜ್ ಇರುವುದರಿಂದ ಟಿಕೆಟ್ ದರವನ್ನೂ ಹೆಚ್ಚಿಸಲಾಗಿದೆ.
ಈಗ ಟಿಕೆಟ್ ದರವನ್ನು ೪೦೦ ರಿಂದ ೭೦೦ ರೂ.ಗೆ ಟಿಕೆಟ್ ದರವನ್ನು ಹೆಚ್ಚಿಸಲಿದ್ದಾರೆ ಎನ್ನಲಾಗಿದೆ. ಬಾಹುಬಲಿ ಸಿನಿಮಾದ ನಂತರ ಮತ್ತೆ ಕಲ್ಕಿ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ.
ಇನ್ನೂ, ನಿರ್ದೇಶಕ ನಾಗ್ ಅಶ್ವಿನ್ ಚಿತ್ರದಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದ ಟ್ರೇಲರ್ ನಲ್ಲೇ ಆ ಸುಳಿವು ನೀಡಿದ್ದಾರೆ. ಕಲ್ಕಿಯ ಟ್ರೈಲರ್ ಪ್ರಪಂಚದ ಮೊದಲ ಪ್ರದೇಶ ಮತ್ತು ಪ್ರಪಂಚದ ಕೊನೆಯ ಪ್ರದೇಶವಾದ ಕಾಶಿಯಿಂದ ಪ್ರಾರಂಭವಾಗುತ್ತದೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. ೬೦೦೦ ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ ಸಜ್ಜಾಗಿದ್ದಾರೆ. ೨ ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.
ಇದುವರೆಗೂ ನಾನು ಯುದ್ಧದಲ್ಲಿ ಸೋತಿಲ್ಲ, ಇದಾವುದೂ ಸೋತಿಲ್ಲ ಎಂದು ಕಟುವಾದ ಡೈಲಾಗ್ ಹೇಳಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಮತ್ತು ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಬ್ ಮತ್ತು ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ವಿಎಫ್‌ಎಕ್ಸ್ ದೃಶ್ಯದಿಂದ ಅಭಿಮಾನಿಗಳು ಪ್ರಭಾವಿತರಾಗಿದ್ದಾರೆ. ಸದ್ಯ, ಕಲ್ಕಿ ಜೂನ್ ೨೭ ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ