ಮಾಧ್ಯಮಗಳಿಗಿಂತ ಜೀವನ ದೊಡ್ಡದ್ದು: ಡಾಲಿ ಧನಂಜಯ
ಬೆಂಗಳೂರು.ಜೂ.೨೪- ಸಾಮಾಜಿಕ ಮಾಧ್ಯಮಗಳಿಗಿಂತ ಜೀವನ ದೊಡ್ಡದ್ದು. ಜೀವನ ಸವಾಲುಗಳಿಂದ ಕೂಡಿದೆ. ಅದನ್ನು ಕಠಿಣ ಪರಿಶ್ರಮ ಮತ್ತು ಸಮರ್ಪಣಾ
ಮನೋಭಾವದಿಂದ ಎದುರಿಸಿ ಎಂದು ನಟ ಡಾಲಿ ಧನಂಜನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಎರಡು ದಿನಗಳ ರಾಷ್ಟ್ರ ಮಟ್ಟದ ಸಿಎಂಆರ್ ಕಲ್ಚರಾ ಸಾಂಸ್ಕೃತಿಕ ಹಬ್ಬದ ಸಮಾರೋಪ ಸಮಾರಂಭದಲ್ಲಿ
ಮಾತನಾಡಿದ ಅವರು, ಮಾಧ್ಯಮಗಳ ಸಂಬಂಧಕ್ಕಿಂತ ಜೀವನ ದೊಡ್ಡದು. ಜೀವನವೂ ಅದನ್ನು ಮೀರಿ ವಿಸ್ತರಿಸುತ್ತದೆ. ಜೀವನದ ಗೆಲುವಿಗೆ ತಾಳ್ಮೆ ಮತ್ತು ಪರಿಶ್ರಮ ಅತ್ಯಗತ್ಯ ಗುಣಗಳಾಗಿದ್ದು ಇವುಗಳನ್ನು ಮೈಗೂಡಿಸಿಕೊಳ್ಳಿ ಆಗ ಬದುಕು ತಾನಾಗೆ ಗೆಲ್ಲುತ್ತದೆ ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಕೆಸಿ.ರಾಮೂರ್ತಿ, ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸಾಂಸ್ಕೃತಿಕ ಕಲಾವಂತಿಕೆಯನ್ನು ಅಭಿವ್ಯಕ್ತಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಕೋಟಿ ಚಿತ್ರದ ನಿರ್ದೇಶಕರಾದ ಪರಮೇಶ್ವರ್ ಗುಂಟ್ಕಲ್ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಿಎಂಆರ್ ಜ್ಞಾನಧಾರ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಸಿ.ಜಗನ್ನಾಥ ರೆಡ್ಡಿ, ಸಿಎಂಆರ್ ಜ್ಞಾನಧಾರ ಟ್ರಸ್ಟ್‌ನ ಟ್ರಸ್ಟಿ ಡಾ.ಕೆ.ಸಿ.ರಾಜುರೆಡಿ, ಪ್ರಾಂಶುಪಾಲ
ಡಾ.ಸಂಜಯ್ ಜೈನ್, ಉಪಪ್ರಾಂಶುಪಾಲ ಡಾ.ಬಿ.ನರಸಿಂಹ ಮೂರ್ತಿ ಉಪಸ್ಥಿತರಿದ್ದರು.