ಕಬ್ಬಿಣದ ರಾಡು ತುಂಬಿದ ಆಟೋ ಪಲ್ಟಿ: ಒಬ್ಬನಿಗೆ ಗಾಯ
ವಾಡಿ,ಜೂ.24-ಪಟಣ್ಣದ ರೈಲ್ವೆ ಮೇಲ ಸೇತುವೆ ಹತ್ತಿರ ಕಬ್ಬಿಣದ ಸಲಾಕೆ ತುಂಬಿದ ಟಂಟಂ ಪಲ್ಟಿಯಾಗಿ ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ.
ಟಂಟಂ ಪಲ್ಟಿಯಾದ ವೇಳೆ ಕಬ್ಬಿಣದ ಸಲಾಕೆ ಹಿಂದೆ ಕುಳಿತಿದ್ದ ಕಾರ್ಮಿಕನ ಹೊಟ್ಟೆ ಮೇಲೆ ಬಿದ್ದು ಗಾಯಗೊಂಡಿದ್ದು, ವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನಾ ಸ್ಥಳ್ಳಕೆ ವಾಡಿ ಪಿಎಸ್‍ಐ ತಿರುಮಲೇಶ್ ಭೇಟಿ ನೀಡಿ ನೀಡಿ ಪರಿಶೀಲನೆ ನಡೆಸಿದ್ದಾರೆ.