ಹಿರಿಯ ಸಾಹಿತಿ ನಾಡೋಜ ಕಮಲಾ ಹಂಪನಾ ನಿಧನಕ್ಕೆ ಸಂತಾಪ
ವಿಜಯಪುರ,24: ಸುಮಾರು ಆರು ದಶಕಗಳಿಗಿಂತ ಹೆಚ್ಚು ಕಾಲ ಕನ್ನಡ ಸಾಹಿತ್ಯ ಕೃಷಿ ಮಾಡಿ ವಿಶೇಷವಾಗಿ ಸಂಶೋಧನಾ ಕ್ಷೇತ್ರದಲ್ಲಿ ಅಪಾರವಾಗಿ ಸೇವೆ ಸಲ್ಲಿಸಿ ಸುಮಾರು 48 ಕೃತಿಗಳನ್ನು ರಚಿಸಿದ್ದ ನಾಡಿನ ಹಿರಿಯ ಹಾಗೂ ಸಾರಸ್ವತ ಲೋಕದ ಕಣ್ಮಣಿಯಾಗಿದ್ದ ಕಮಲಾ ಹಂಪನಾ ಅವರ ನಿಧನಕ್ಕಾಗಿ ಕರ್ನಾಟಕ ಕಲಾ ಸಂಘ ಸಂತಾಪ ಸೂಚಿಸಿದೆ.
ನಾಡೋಜ ಕಮಲಾ ಹಂಪನಾ ಹಾಗೂ ಅವರ ಪತಿ ಹಂ.ಪ.ನಾಗರಾಜಯ್ಯ ಅವರು ಸಾಹಿತ್ಯ ಲೋಕದ ಅಪೂರ್ವ ದಂಪತಿಗಳಾಗಿದ್ದರು, ಹಂ.ಪ.ನಾಗರಾಜಯ್ಯ ಅವರು ರಾಜ್ಯ ಕ.ಸಾ.ಪ. ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ನಾನು 1982 ರಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಹಂಪನಾ ದಂಪತಿಗಳನ್ನು ನಾನು ಭೇಟಿಯಾದಾಗ ಕಮಲಾ ಹಂಪನಾ ಅವರು ಕೂಡ ನಮ್ಮನ್ನೆಲ್ಲ ಪ್ರೋತ್ಸಾಹಿಸಿ ಹುರಿದುಂಬಿಸಿದ್ದನ್ನು ಮರೆಯಲಾಗದು ಎಂದು ಸಂಘದ ಅಧ್ಯಕ್ಷ ಬಾಬುರಾವ ಕುಲಕರ್ಣಿಯವರು ಸಂತಾಪ ಸೂಚಿಸಿದ್ದಾರೆ.
.ಸದಸ್ಯರುಗಳಾದ ರಾಜಶೇಖರ ಕಲ್ಮಠ, ಡಾ. ಬಿ.ಎಸ್.ಕಳ್ಳಿಮಠ, ಕಲ್ಯಾಣರಾವ ದೇಶಪಾಂಡೆ, ವಸಂತರಾವ ಕೊರ್ತಿ, ಪ್ರಕಾಶ ಇನಾಮದಾರ, ಬಿ.ಎಸ್. ಸಜ್ಜನ, ದಾನೇಶ ಅವಟಿ, ಡಾ. ಯಲಗೋಡ, ಪಿ.ಆರ್. ಕುಲಕರ್ಣಿ, ರಾಮಚಂದ್ರ ದೀಕ್ಷಿತ, ಎಂ.ವಿ.ಸಿಂಧೆ, ಉಲ್ಲಾಸ ಪಾಟೀಲ ಮೊದಲಾದವರು ಹಿರಿಯ ಸಾಹಿತಿ, ಬಹುಮುಖ ಪ್ರತಿಭೆಯ ಕಮಲಾ ಹಂಪನಾ ಅವರ ನಿಧನಕ್ಕಾಗಿ ಕಂಬನಿ ಮಿಡಿದಿದ್ದು, ಕನ್ನಡ ಸಾರಸ್ವತ ಲೋಕದ ದಿಟ್ಟ ಹೋರಾಟಗಾರ್ತಿಯಾಗಿ ಅವರು ಅನೇಕ ಸಂದರ್ಭಗಳಲ್ಲಿ ಕನ್ನಡಪರವಾದ ಹೋರಾಟ ಮಾಡುವಲ್ಲಿ ಕಮಲಾ ದಂಪತಿಗಳು ಮುಂಚೂಣಿಯ ಸ್ಥಾನದಲ್ಲಿರುತ್ತಿದ್ದರೆಂದು ಸಂತಾಪ ವ್ಯಕ್ತಪಡಿಸಿದ್ದಾರೆ.