ಕಸಾಪದಲ್ಲಿ ಸಾಹಿತಿ ಕಮಲಾ ಹಂಪನಾಗೆ ನುಡಿ ನಮನ
ವಿಜಯಪುರ,ಜೂ.24:ನಾಡೋಜ ಡಾ. ಕಮಲಾ ಹಂಪನಾ ಅವರು ಮಹಿಳಾ ಪರ ಗಟ್ಟಿ ಧ್ವನಿಯಾಗಿದ್ದರು. ಅವರು ಹುಟ್ಟಿನಿಂದಲೇ ಸುಸಂಸ್ಕøತ ಪರಿವಾರದಿಂದ ಬಂದವರು. ಹೀಗಾಗಿ ಅವರಿಗೆ ಸಾಹಿತ್ಯ ರಚನೆ ಮತ್ತು ಕನ್ನಡದ ಪ್ರೇಮ ರಕ್ತಗತವಾಗಿ ಬಂದಿತ್ತು ಎಂದು ಸಾಹಿತಿ ವಿಜಯಲಕ್ಷ್ಮಿ ಹಳಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಮ್ಮನ್ನು ಅಗಲಿದ ನಾಡೋಜ ಡಾ. ಕಮಲಾ ಹಂಪನಾ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಲವಾರು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಿದವರು. ಮಹಿಳಾ ಸಬಲೀಕರಣ ಮತ್ತು ಸೃಜನಶೀಲತೆ ಪ್ರತೀಕವಾಗಿದ್ದ ಅವರು ಮೂಡಬಿದರೆಯಲ್ಲಿ ಜರುಗಿದ ಎಪ್ಪತ್ತೊಂದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡದ ಕಂಪನ್ನು ಹರಡಿದ ಶ್ರೇಷ್ಠ ಮಹಿಳಾ ಸಾಹಿತಿಗಳಾಗಿದ್ದರು ಎಂದು ವಿಜಯಲಕ್ಷ್ಮಿ ಹಳಕಟ್ಟಿ ಅವರು ನುಡಿನಮನ ಸಲ್ಲಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಹಿಳೆಯರು ಸಂಶೋಧನಾ ಕ್ಷೇತ್ರದಲ್ಲಿ ವಿರಳವಾಗಿರುವ ಕಾಲದಲ್ಲಿ ಜೈನ್ ಸಾಹಿತ್ಯ ಸಂಶೋಧನೆ ಮಾಡಿ ನಾಡಿನ ಕೀರ್ತಿ ಹೆಚ್ಚಿಸಿದವರು, ಇಂದಿನ ಯುವ ಜನಾಂಗಕ್ಕೆ ಸುಂದರ ಬದುಕಿನ ಗುಟ್ಟು ಸಾರಿದವರು ಮತ್ತು ನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದ ಇವರ ಅಗಲಿಕೆ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರು.
ಮೆಹತಾಬ ಕಾಗವಾಡ ಶ್ರದ್ಧಾಂಜಲಿ ಸಭೆಯಲ್ಲಿ ಹಾಡುವದರ ಮೂಲಕ ನುಡಿನಮನ ಸಲ್ಲಿಸಿದರು.
ಕಸಾಪ ಸದಸ್ಯರಾದ ಅಭಿμÉೀಕ ಚಕ್ರವರ್ತಿ ಮಾತನಾಡುತ್ತ ಐವತ್ತು ವರ್ಷಗಳ ಹಿಂದೆ ಅಂತರ್ಜಾತಿ ವಿವಾಹ ಆಗುವದರ ಮೂಲಕ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ಧಂತಾಗಳಲ್ಲಿ ಬದುಕಿ ನಾಡಿನ ಯುವ ಜನಾಂಗಕ್ಕೆ ಮಾದರಿ ಬದುಕು ತೋರಿಸಿಕೊಟ್ಟ ಮಹಾನ ಚೇತನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಸಂಗಮೇಶ ಮೇತ್ರಿ, ಶರಣಗೌಡ ಪಾಟೀಲ, ರವಿ ಕಿತ್ತೂರ, ಸುಭಾಸ ಕನ್ನೂರ, ಗಂಗಮ್ಮ ರಡ್ಡಿ, ಅನ್ನಪೂರ್ಣ ಬೆಳ್ಳನ್ನವರ, ಶಿಲ್ಪಾ ಭμÉ್ಮ, ಶೋಭಾ ಮೆಡಾಗಾರ, ಸಂಗಮೇಶ ಚೂರಿ, ಲತಾ ಗುಂಡಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಡಿ.ಎಸ್. ಬಿರಾದಾರ, ವಿದ್ಯಾವತಿ ಅಂಕಲಗಿ, ಜಿ.ಎಸ್. ಬಳ್ಳೂರ, ಡಾ. ಆನಂದ ಕುಲಕರ್ಣಿ, ಶಿವಾಜಿ ಮೋರೆ, ಸಿದ್ದಾರಾಮ ಬಿರಾದಾರ, ಅಮೋಘಸಿದ್ಧ ಪೂಜಾರಿ, ಪ್ರಶಾಂತ ಕಾಳೆ, ಟಿ.ಆರ್. ಹಾವಿನಾಳ, ಎ. ಎಸ್. ಕರಜಗಿ, ಗಂಗಮ್ಮ ರಡ್ಡಿ, ಭಾಗಿರಥಿ ಶಿಂಧೆ ಮುಂತಾದವರು ಇದ್ದರು.