ಮಹಿಳಾ ಸಬಲೀಕರಣ ಘಟಕ ಉದ್ಘಾಟನೆ
ಕಲಬುರಗಿ: ಜೂ.24:ನೆಹರು ಗಂಜ್ ಪ್ರದೇಶದಲ್ಲಿನ ಶ್ರೀ ನಗರೇಶ್ವರ ಶಾಲೆಯಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕಲಬುರಗಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕವನ್ನು ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಘವೇಂದ್ರ ಮೈಲಾಪುರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆ.ಎ.ವಿ.ಎಂ ವಿಭಾಗಿಯ ಕಾರ್ಯದರ್ಶಿ ವೀರೇಶ ವಾಗನಗೇರಿ, ಕೆ.ಎ.ವಿ.ಎಂ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ವಾಸವಿ ಮಹಿಳಾ ಮಂಡಲ ಅಧ್ಯಕ್ಷೆ ಶೈಲಜಾ ಮದರಗಾಂವ, ವಾಸವಿ ಯುವತಿ ಮಂಡಲ ಅಧ್ಯಕ್ಷೆ ನೀತಾ ವಿ. ಮಾದಮಶಟ್ಟಿ, ವಾಸವಿ ಯುವ ಜನ್ ಸಂಘ ಅಧ್ಯಕ್ಷ ವಿನಯ್ ಚಿಕಟವಾರ, ರಾಜ್ಯ ಸಮಿತಿ ನಿರ್ದೇಶಕಿ ಗೀತಾ ಆರ್.ಗಂಪಾ, ಜಿಲ್ಲಾ ಸಬಲಿಕರಣ ಘಟಕದ ಅಧ್ಯಕ್ಷೆ ಆರತಿ ತಾವರಗೇರಾ, ಖಜಾಂಚಿ ವೈಭವಿ ಕಲಕೋಟೆ, , ಸದಸ್ಯರಾದ ಲಕ್ಷ್ಮೀ ಸುರಪುರ, ರಾಧಿಕಾ ಇಟಗಂಪಲ್ಲಿ, ಉಮಾ ಅತನೂರ, ಸಂಗೀತಾ ಎಸ್.ಜಿ., ಸವಿತಾ ಗಾದಾ, ಶಾರದಾ ಪಾರಸ್ವರ್, ಸ್ವಾತಿ ಕೋಟೂರ್, ವಿದ್ಯಾ ಬುದ್ದಾ ಸೇರಿದಂತೆ ಇತರರು ಇದ್ದರು.