ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಡಾ. ಶಾಮಪ್ರಸಾದ ಮುಖರ್ಜಿ ಬಲಿದಾನ ದಿವಸ್ ಆಚರಣೆ
ಬೀದರ್:ಜೂ.24: “ಏಕ್ ದೇಶ್ ಮೆ ದೋ ನಿಶಾನ್, ದೋ ವಿಧಾನ್, ದೋ ಸಂವಿಧಾನ್ ನಹಿ ಚಲೇಗಾ” ಎಂಬ ಘೋಷಣೆಯೊಂದಿಗೆ ಕಾಶ್ಮೀರದ ವಿಶೇಷ ಕಾನೂನನ್ನು ಧಿಕ್ಕರಿಸಿ ಕಲಂ 370 ರದ್ದುಪಡಿಸಬೇಕೆಂದು ಹೋರಾಡಿದ ಕೀರ್ತಿ ಡಾ. ಶಾಮಪ್ರಸಾದ ಮುಖರ್ಜಿಯವರಿಗೆ ಸಲ್ಲುತ್ತದೆ ಎಂದು ಭಾರತೀಯ ಜನತಾ ಪಕ್ಷದ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರದ ನಾಯಕರಾದ ಈಶ್ವರಸಿಂಗ್ ಠಾಕೂರ ತಿಳಿಸಿದರು.
ನಗರದ ನೌಬಾದನಲ್ಲಿರುವ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಅಖಂಡತೆ ಮತ್ತು ಐಕ್ಯತೆಗಾಗಿ ಪ್ರಾಣಾರ್ಪಣೆ ನೀಡಿದ್ದಾರೆ. ಲೋಕಸಭೆಯಲ್ಲಿ ಮೊಟ್ಟಮೊದಲ ವಿರೋಧ ಪಕ್ಷದ ನಾಯಕರಾಗಿ ಕಾರ್ಯಮಾಡಿದ ಮುಖರ್ಜಿಯವರು ಈ ದೇಶ ಕಂಡ ಅಪ್ರತಿಮ ನಾಯಕರಾಗಿದ್ದಾರೆ. ಅವರ ಆದರ್ಶ ಮತ್ತು ಸಾಧನೆಗಳನ್ನು ಅನುಸರಿಸುವ ಮೂಲಕ ಅಳವಡಿಸಿಕೊಳ್ಳೋಣ ಎಂದರು.
ಇದೇ ವೇಳೆ ಡಾ. ಶಾಮಪ್ರಸಾದ ಮುಖರ್ಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಗುರುನಾಥ ಜಾಂತಿಕರ, ಬಿಜೆಪಿ ರಾಜ್ಯ ಪರಿಶಿಕ್ಷಣ ಪ್ರಕೋಷ್ಟದ ಸಂಚಾಲಕ ರಾಜಶೇಖರ ನಾಗಮೂರ್ತಿ, ಕಾರ್ಯಾಲಯ ಕಾರ್ಯದರ್ಶಿ ರಾಜಕುಮಾರ ಪಾಟೀಲ ನೆಮತಾಬಾದ, ಗೋಪಾಲ ಕುಕ್ಕಡನಗರ, ಪ್ರಧಾನ ಕಾರ್ಯದರ್ಶಿ ಗಣೇಶ ಭೋಸ್ಲೆ, ನರೇಶ ಗೌಳಿ, ಅಮಜದ್ ಅಲಿ, ಶ್ರೀಕಾಂತ ಮೋದಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ವೀರು ದಿಗ್ವಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ಭಾರತೀಯ ಜನತಾ ಪಕ್ಷದ ತಾಲೂಕಾ ಉಪಾಧ್ಯಕ್ಷ ನರೇಶ ಗೌಳಿ ಅವರ ಜನ್ಮದಿನ ಆಚರಿಸಲಾಯಿತು.