ಧರ್ಮಸ್ಥಳ ಯೋಜನೆಯಿಂದ ಸಹಾಯಧನದ ಚೆಕ್ ವಿತರಣೆ
ಅಥಣಿ :ಜೂ.24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಥಣಿ ತಾಲೂಕಿನ ವತಿಯಿಂದ ತಾಲೂಕಿನ ಅರಟಾಳ ಕಾರ್ಯಕ್ಷೇತ್ರದ ಕಲ್ಲಪ್ಪ ಪೂಜಾರಿ ಇವರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆ ಖರ್ಚಿಗೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 15000 ರೂ. ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು. ಸಹಾಯಧನದ ಚೆಕ್ ವಿತರಣೆ ಮಾಡಿ ಅಥಣಿ ಜಿಲ್ಲೆಯ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಮಾತಾಡಿ ಧರ್ಮಸ್ಥಳದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಯೋಜನೆಯ ತಾಲೂಕಾ ಯೋಜನಾಧಿಕಾರಿ ರಜಬ್ ಅಲಿ ಮೇಲಿನಮನಿ, ವಲಯದ ಮೇಲ್ವಿಚಾರಕ ಮಹಾಂತೇಶ ಮಠಪತಿ, ಸೇವಾ ಪ್ರತಿನಿಧಿ ಶಬಾನಾ ಮುಜಾವರ, ರೇಖಾ ಪರಶುರಾಮ, ಗ್ರಾ. ಪಂ ಸದಸ್ಯ ರಾಮಣ್ಣ ಪೂಜಾರಿ ಸೇರಿದಂತೆ ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.