ಶಾಮ ಪ್ರಸಾದ ಮುಖರ್ಜಿಯ ಪುಣ್ಯಸ್ಮರಣೆ ಆಚರಣೆ
ಬೀದರ:ಜೂ.24: ಭಾರತೀಯ ಜನತಾ ಪಕ್ಷದ ಸಂಸ್ಥಾಪಕರು ದೇಶ ಕಂಡ ಅಪ್ರತಿಮ ನಾಯಕರಾದ ಶಾಮಾ ಪ್ರಸಾದ ಮುಖರ್ಜಿಯವರ ಪುಣ್ಯ ಸ್ಮರಣೆಯ ದಿನ ಕರಪೂರ ಲೇಔಟ್‍ನಲ್ಲಿರುವ ಶಾಮಪ್ರಸಾದ ಮುಖರ್ಜಿ ಉದ್ಯಾನವನದಲ್ಲಿನ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಂದಿಸಲಾಯಿತು.
ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಈ ಹಿಂದೆ ನಾನು ಈ ಉದ್ಯಾನವನದ ಹೆಸರು ಶಾಮ ಪ್ರಸಾದ ಮುಖರ್ಜಿ ಎಂದು ನಾಮಕರಣ ಮಾಡಿ ಅವರ ಪುತ್ಥಳಿ ಅನಾವರಣಗೊಳಿಸಿದೆ. ಈ ಮಹಾ ಪುರುಷರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಪ್ರತಿಮ ದೇಶಭಕ್ತರಾದ ಇವರು ನೀಡಿದ ಬಲಿದಾನವನ್ನು ನಾವು ಸ್ಮರಿಸಬೇಕು. “ಏಕ್ ದೇಶ ಮೇ ದೋ ವಿಧಾನ ದೋ ನಿಷಾನ ನಹಿ ಚಲೇಂಗೆ” ಎಂಬ ಘೋಷಣೆ ಇಂದು ಮೈ ಜುಮ್ ಎನಿಸುತ್ತದೆÉ. ಈ ಉದ್ಯಾನವನದಲ್ಲಿ ಬರುವ ದಿನದಲ್ಲಿ ಪ್ರತಿ ವರ್ಷ ಅವರ ಜನ್ಮದಿನಾಚರಣೆ ಅದ್ದೂರಿಯಾಗಿ ಆಚರಿಸಿ ಒಂದು ಹೊಸ ಅಧ್ಯಾಯ ಪ್ರಾರಂಭಿಸಿ ಅವರಿಗೆ ನೀಡುವ ನಿಜವಾದ ಶೃದ್ಧಾಂಜಲಿ ಆಗುತ್ತದೆ ಎಂದು ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಕರೆ ನೀಡಿದರು.
ಈ ಸಂಧರ್ಭದಲ್ಲಿ ಮಾಜಿ ನಗರ ಸಭೆ ಸದಸ್ಯ ನೀತಿನ್ ಕರಪೂರ, ನಾಗರಾಜ ಕರಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.