ಜನಸಂಘ ನಾಯಕ ಶ್ಯಾಮಪ್ರಕಾಶ ಮುಖರ್ಜಿ ಸ್ಮರಣೆ
ಆಳಂದ:ಜೂ.24: ಪಟ್ಟಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಜನಸಂಘ ನಾಯಕ ಡಾ. ಶ್ಯಾಮಪ್ರಕಾಶ್ ಮುಖರ್ಜಿ ಅವರ ಬಲಿದಾನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ್, ಆಳಂದ ಮಂಡಲದ ಅಧಕ್ಷ ಮಲ್ಲಿಕಾರ್ಜುನ್ ಕಂದಗೋಳೆ, ಪಕ್ಷದ ಸಂಜಯ ಮಿಸ್ಕಿನ್ ಅವರು ಮಾತನಾಡಿ ಶ್ಯಾಮ ಪ್ರಸಾದ ಮುರ್ಖಜಿ ಅವರ ಜೀವನ ಹಾಗೂ ಹೋರಾಟದ ಬಗ್ಗೆ ಸ್ಮರಿಸಿದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾನೆ, ಜಿಲ್ಲಾ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಸುನಿಲ್ ಹೀರೊಳಿಕರ್, ನಗರ ಅಧ್ಯಕ್ಷ ಬಸವರಾಜ್ ಹತರಕಿ, ನಗರ ಉಪಾಧ್ಯಕ್ಷ ಗಣೇಶ್ ಭೋಸಲೆ, ಸಿದ್ದು ಪಾಟೀಲ್, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ನಾಯಕ್ ಮುಖಂಡ ಶ್ರೀಶೈಲ ಖಜೂರಿ, ಪ್ರಭಾಕರ್ ಘನಾತೆ ಬಿಜೆಪಿ ಹಲವಾರು ಮುಖಂಡರು ಭಾಗವಹಿಸಿದ್ದರು.