ಜನಮನ ಸೆಳೆದ ಗಾಣಸಿರಿ ಸಂಗೀತ ಸಂಭ್ರಮ
ಕಲಬುರಗಿ :ಜೂ.24:ಪುಟ್ಟರಾಜ್ ಸಾಂಸ್ಕøತಿಕ ಕಲಾ ಅಭಿವೃದ್ಧಿ ಸಂಸ್ಥೆ ಕಲಬುರಗಿ ವತಿಯಿಂದ ಇತ್ತೀಚಿಗೆ ನಗರದ ಗಾಣದೇವತೆ ದೇವಸ್ಥಾನದಲ್ಲಿ ಗಾಣಸಿರಿ ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಉದ್ಘಾಟನೆ ಯನ್ನು ಮಲ್ಲಿಕಾರ್ಜುನ ಮಾನಕರ್ ಗೊಬ್ಬುರ್ {ಬಿ } ನೆರವೇರಿಸಿದರು,ಅಧ್ಯಕ್ಷತೆ ಯನ್ನು ಗುರುಬಸಪ್ಪ ಸಜ್ಜನಶೆಟ್ಟಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಡಿ. ಬಿ. ಕಲಶೆಟ್ಟಿ, ದೇವಿಂದ್ರಪ್ಪ ಬಿರಾದಾರ್, ಬಿ. ಎಂ. ಪಾಟೀಲ್, ವೀರೇಶ್ ಕಲಶೆಟ್ಟಿ, ಶ್ರೀಶೈಲ್ ಕಲಶೆಟ್ಟಿ ಬಂದ್ರಾಡ, ಜಗದೀಶ್ ತಡಕಲ್, ಮಹಾಂತೇಶ್ ಕೆ. ಕಲಬುರಗಿ, ಚಂದ್ರ ಕಾಂತ್ ಮಾಡಿಯಾಳ್, ಜಗದೀಶ್ ತಡಕಲ್,ಬಸವರಾಜ್ ಕಲಶೆಟ್ಟಿ ಮಾಡಿಯಾಳ್, ಕಲಬುರಗಿ ಸಂಸ್ಥೆ ಯ ಅಧ್ಯಕ್ಷ ರಾದ ದತ್ತರಾಜ ಕಲಶೆಟ್ಟಿ ಭಾಗವಹಿಸಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಬಾಬುರಾವ ಕೋಬಾಳ್, ಬಸಯ್ಯ ಗುತ್ತೇದಾರ ತೆಲ್ಲೂರ, ರಾಚಯ್ಯ್ ರಟಕಲ್, ಸೂರ್ಯಕಾಂತ್ ಗೊಬ್ಬುರ್ ವಾಡಿ, ಶ್ರೀಮತಿ ಲೀಲಾವತಿ ಸಿ. ಗುಳಗಿ, ಸೂರ್ಯಕಾಂತ್ ಬಿದನೂರು, ಸಿದ್ದಣ್ಣ ನೆಲೋಗಿ, ಶಿವಯೋಗಿ ಹೆರೂರ್, ವಿಶ್ವ ನಾಥ್ ಹಡಪದ ರವಿಸ್ವಾಮಿ ಗೊಟೂರ್ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದಲ್ಲಿ ಮಹಿಳೆಯರು ಗಣ್ಯ ಮಾನ್ಯರು ಮುದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.