ರೋಗ ಮುಕ್ತ ಸಮಾಜಕ್ಕೆ ಯೋಗ ಅವಶ್ಯ: ಡಾ. ಮುರುಘರಾಜೇಂದ್ರ ಶ್ರೀ
ಆಳಂದ:ಜೂ.24: ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ನಿತ್ಯ ಜೀನವದಲ್ಲಿ ಯೋಗದ ಸೂತ್ರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಡಗಾ, ಮುಗಳಖೋಡ ಕೊಟನೂರ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸಲಹೆ ನೀಡಿದರು.
ತಾಲೂಕಿನ ಜಿಡಗಾ ನವಕಲ್ಯಾಣ ಶ್ರೀಮಠದಲ್ಲಿ ಡಿವೈನ್ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅಅವರು ಆಶೀರ್ವಚನ ನೀಡಿದರು.
ಮಾನವನ ಆಯುಷ್ಯದ ಅಭಿವೃದ್ಧಿಯ ಮಹಾಮಂತ್ರವೆಂದರೆ ಯೋಗ ನಾವೆಲ್ಲರೂ ರೋಗ ಬರುವುದಕ್ಕಿಂತ ಮುಂಚೆ ಯೋಗ ಮಾಡಿ ರೋಗ ಮುಕ್ತ ಸಮಾಜವನ್ನು ಕಟ್ಟೋಣ, ಮನುಷ್ಯ ಒತ್ತಡದ ಬದುಕಿನಲ್ಲಿ ಅನೇಕ ಕಾಯಿಲೆಗಳಿಗೆ ಗುರಿಯಾಗಿ ನೂರು ವರ್ಷ ಬದುಕುವ ಮನುಷ್ಯ 50 ವರ್ಷಕ್ಕೆ ಬದುಕು ಪೂರ್ಣಗೊಳಿಸಿಕೊಳ್ಳುತಿದ್ದಾನೆ, ದಿನದ ಹನ್ನೆರಡು ಗಂಟೆಯಲ್ಲಿ ಬರಿ 30 ನಿಮಿಷ ನಾವು ಯೋಗಕ್ಕಾಗಿ ಮೀಸಲಾಗಿಟ್ಟರೆ ಮನುಷ್ಯನ 20 ವರ್ಷದ ಆಯುಷ್ಯ ವೃದ್ಧಿ ಆಗಲು ಸಾಧ್ಯವಿದೆ ಎಂದು ಅವರು ಹೇಳಿದರು.
ಯೋಗಾಸನವು ಪ್ರಾಚೀನ ಭಾರತೀಯ ಪದ್ಧತಿಯೊಂದಾಗಿದೆ, ಇದು ಶಾರೀರಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ದೇಹದ ಬಲ, ತಾಳ್ಮೆ, ಮತ್ತು ಸ್ವಲೋಕನವನ್ನು ವೃದ್ಧಿಸುತ್ತದೆ. ನಿಯಮಿತ ಯೋಗಾಭ್ಯಾಸವು ದೇಹದ ಸೂಕ್ಷ್ಮಾಂಶಗಳನ್ನು ಬಲಪಡಿಸಲು, ಶ್ವಾಸಕೋಶಗಳ ಸಾಮಥ್ರ್ಯವನ್ನು ವೃದ್ಧಿಸಲು, ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮನಸ್ಸಿಗೆ ಶಾಂತಿ ಮತ್ತು ಸಮತೋಲನ ನೀಡುತ್ತದೆ. ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು, ಮತ್ತು ಸಮಾಧಾನದ ಸ್ಥಿತಿಯನ್ನು ತಲುಪಲು ಯೋಗ ಸಹಾಯಕವಾಗಿದೆ ಎಂದು ಶ್ರೀಗಳು ಹೇಳಿದರು.
ಯೋಗಾಸನಗಳು ದೇಹದ ಲವಚಿಕತೆಯನ್ನು ಹೆಚ್ಚಿಸುತ್ತವೆ ಮತ್ತು ಸಮನ್ವಯತೆಯನ್ನು ಉತ್ತಮಗೊಳಿಸುತ್ತವೆ. ಇದರಿಂದ ದೈನಂದಿನ ಚಟುವಟಿಕೆಗಳಲ್ಲಿ ಸುಲಭತೆಯೂ, ಸುಸ್ಥಿರತೆಯೂ ಬರುತ್ತದೆ. ನಿಯಮಿತ ಅಭ್ಯಾಸವು ಒಳ್ಳೆಯ ಜೀವನ ಶೈಲಿಯನ್ನು ಪೆÇ್ರೀತ್ಸಾಹಿಸುತ್ತದೆ. ಇದು ಆರೋಗ್ಯಕರ ಆಹಾರ ನಿಯಮ, ಸಮರ್ಪಕ ನಿದ್ರೆ, ಮತ್ತು ಧನಾತ್ಮಕ ಚಿಂತನೆಗಳ ಮೂಲಕ ಒಟ್ಟಾರೆ ಜೀವನವನ್ನು ಯೋಗಾಸನದ ಮಹತ್ವವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು, ಆರೋಗ್ಯದೊಂದಿಗೆ ಆತ್ಮಸಂತೃಪ್ತಿಯನ್ನೂ ಪಡೆಯಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿವಯೋಗಿ ಜ್ಞಾನ ಮಂದಿರದ 120ಕ್ಕೂ ಅಧಿಕ ಮಕ್ಕಳು ಮತ್ತು ಸಿದ್ಧಶ್ರೀ ಶಿಕ್ಷಣ ಸಂಸ್ಥೆಯ ಎಲ್ಲ ಮಕ್ಕ¼ ಯೋಗದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಬೆಳ್ಳನವರ ಮಾತನಾಡಿದರು. ಅಮೂಲ್ಯ ಹಿರೇಮಠ ನಿರೂಪಿಸಿದರು. ಬಸವರಾಜ ಜೋಪಾಟೆ ವಂದಿಸಿದರು.