ದಸಾಪ ಜಿಲ್ಲಾಧ್ಯಕ್ಷರಾಗಿ ಡಾ. ದಯಾನಂದ ಕಿನ್ನಾಳ್
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ24: ದಲಿತ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಡಾ. ದಯಾನಂದ ಕಿನ್ನಾಳ್ ನೇಮಕವಾಗಿದ್ದಾರೆ.
ಡಾ. ದಯಾನಂದ ಕಿನ್ನಾಳ್ ಇವರ ಕ್ರಿಯಾಶೀಲತೆ ಸಾಮಾಜಿಕ ಕಳಕಳಿ ಸಂಘಟನಾ ಚಾತುರ್ಯ ಹಾಗೂ ಸಾಹಿತ್ಯ ಕೃಷಿಯನ್ನು ಗುರುತಿಸಿ ಗದಗಿನ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಕಿನ್ನಾಳ್ ಅವರನ್ನು ನೇಮಕ ಮಾಡಿದೆ.
ಹೂವಿನಹಡಗಲಿಯಲ್ಲಿ 10 ವರ್ಷ, ಕಮಲಾಪುರದಲ್ಲಿ 10 ವರ್ಷ ಹಾಗೂ ಪ್ರಸಕ್ತದಲ್ಲಿ ಸದರಿ ಕಾಲೇಜಿನಲ್ಲಿ 8 ವರ್ಷಗಳಿಂದ ಉಪನ್ಯಾಸಕರಾಗಿ ಕಿನ್ನಾಳ್ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಜಿಲ್ಲಾ ತಾಲೂಕು ಹಾಗೂ ಹೋಬಳಿ ಮಟ್ಟದ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳ ಒಡನಾಡಿಗಳಾಗಿ ನಿರಂತರ ಸಂಪರ್ಕದಲ್ಲಿದ್ದು ಸಮಾಜದ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡ ನಾಡು ನುಡಿ ನೆಲ ಜಲದ ಬಗ್ಗೆ ಅತೀವ ಮುತುವರ್ಜಿ ಇರುವ ಇವರು ಕವನ ಸಂಕಲನ, ಕಥಾ ಸಂಕಲನ, ವೈಚಾರಿಕ    ಮತ್ತು ಸಂಶೋಧನಾ  ಕ್ಷೇತ್ರ ಒಳಗೊಂಡು ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪ್ರತಿಭೆಯನ್ನು ಮನಗಂಡು ದಸಾಪ ರಾಜ್ಯದಕ್ಷರಾದ ಡಾ. ಅರ್ಜುನ ಗೊಳಸಂಗಿ ಕಾರ್ಯದರ್ಶಿ ಸುಭಾಸ ಹೊದ್ಲೂರ ಹಾಗೂ ಕಲಬುರಗಿಯ ದಸಾಪ ವಿಭಾಗೀಯ ಸಂಯೋಜಕರಾದ ಡಾ. ಗಾಂಧೀಜಿ ಮೊಳಕೇರಿ ಇವರುಗಳು ಕಿನ್ನಾಳ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.